ನಕ್ಸಲ್‌ ಕನ್ಯಾಕುಮಾರಿ, ರಮೇಶ್‌ ಕೋರ್ಟ್‌ಗೆ ಹಾಜರು

ಕಾರ್ಕಳ : ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಕ್ಸಲ್‌ ಸದಸ್ಯರಾದ ಕನ್ಯಾಕುಮಾರಿ ಮತ್ತು ರಮೇಶ್‌ (ಶಿವ ಕುಮಾರ್‌) ಅವರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಬೆಂಗಳೂರು ಪೊಲೀಸರು ಬಿಗು ಭದ್ರತೆಯೊಂದಿಗೆ ಕರೆತಂದು ಕಾರ್ಕಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. 2011ರ ನ. 19ರಂದು ಹೆಬ್ರಿ ತಾಲೂಕು ಕಬ್ಬಿನಾಲೆಯಲ್ಲಿ ನಡೆದ ಸದಾಶಿವ ಗೌಡ ಅವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲಾಯಿತು.

ಸದಾಶಿವ ಗೌಡ ಅವರನ್ನು ಕನ್ಯಾಕುಮಾರಿಯನ್ನೊಳಗೊಂಡ ನಕ್ಸಲ್‌ ತಂಡ ಅಪಹರಿಸಿ ಗುಂಡು ಹಾರಿಸಿ ಕೊಲೆ ನಡೆಸಿತ್ತು ಎನ್ನುವ ಆರೋಪ ಇವರ ಮೇಲಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ