ಶ್ರೀ ಶ್ರೀನಿವಾಸ ದೇವರ ಗದ್ದೆಯಲ್ಲಿ ನಟ್ಟಿ ಕಾರ್ಯಕ್ರಮ

ಉಡುಪಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ, ಪರೀಕ ಸಂಸ್ಥೆಗೆ ಒಳಪಟ್ಟ ಶ್ರೀ ಶ್ರೀನಿವಾಸ ದೇವರ ಒಂದು ಎಕರೆ ಗದ್ದೆಯನ್ನು ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ನಿರಂತರ ಹತ್ತನೇ ವರ್ಷದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು 85 ಸಿಬ್ಬಂದಿಗಳು ಕೂಡಿಕೊಂಡು ತಾವೇ ಬೆಳೆಸಿದ ನೇಜಿ ನಾಟಿ ಮಾಡಿ ಎಲ್ಲರಿಗೂ ಮಾದರಿಯಾದರು.

ನಿರಂತರ ಒಂದು ತಿಂಗಳಿನಿಂದ ಇದಕ್ಕಾಗಿ ತಯಾರಿ ನಡೆಸಿ ಈ ದಿನ ದೇವಸ್ಥಾನದ ಅರ್ಚಕರು ಶ್ರೀನಿವಾಸ ದೇವರ ತೀರ್ಥ ಪ್ರಸಾದವನ್ನು ಶಾಸ್ತ್ರದಂತೆ ಗದ್ದೆಗೆ ಪ್ರೋಕ್ಷಣೆ ಮಾಡುವ ಮೂಲಕ ಚಾಲನೆಗೊಳಿಸಿದರು. ಸರಿ ಸುಮಾರು ಎರಡೂವರೆ ಘಂಟೆಯಲ್ಲಿ ಒಂದು ಎಕರೆ ಜಮೀನನ್ನು ನಾಟಿ ಮಾಡಿದ ಸಿಬ್ಬಂದಿಗಳು ಕೊನೆಯಲ್ಲಿ ಸ್ವಲ್ಪ ಹೊತ್ತು ಹಗ್ಗ ಜಗ್ಗಾಟವನ್ನೂ ನಡೆಸಿ ಸಂಭ್ರಮಿಸಿದರು. ಇದರಿಂದ ಬರುವ ಭತ್ತವನ್ನು ಬಳಸಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಮೂರು ತಿಂಗಳಿಗಾಗುವಷ್ಟು ಅಕ್ಕಿಯನ್ನು ಉತ್ಪಾದಿಸಲಾಗುತ್ತದೆ.
ಪ್ರತೀ ಬಾರಿಯ ಈ ಕೃಷಿ ಕಾರ್ಯಕ್ರಮಕ್ಕೆ ಬೆಂಬಲವಾಗಿ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಉಡುಪಿಯ ಖ್ಯಾತ ಕಂಟ್ರಾಕ್ಟರ್ ನಂದಕುಮಾರ್‌ರವರ ವತಿಯಿಂದ ಮಾಡಲಾಗಿತ್ತು.

ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಉಸ್ತುವಾರಿಯಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ