ಸೆ.27ರಿಂದ ಮಂಗಳೂರಿನಲ್ಲಿ ನ್ಯಾಟ್‌ಕಾನ್ ರಾಷ್ಟ್ರೀಯ ಸಮಾವೇಶ

ಮಂಗಳೂರು : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ ವತಿಯಿಂದ ಏಷ್ಯಾ ಪೆಸಿಫಿಕ್ ಫೆಡರೇಶನ್ ಆಫ್ ಡ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್ ಸಹಯೋಗದೊಂದಿಗೆ 40ನೇ ರಾಷ್ಟ್ರೀಯ ಸಮಾವೇಶ ನ್ಯಾಟ್ ಕಾನ್- 2024 ಸೆ.27-28ರಂದು ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಸನ್ಸ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಆರಿನ್ ಕ್ಯಾಪಿಟಲ್ ಪಾರ್ಟ್‌ನರ್ಸ್ ಅಧ್ಯಕ್ಷ ಮತ್ತು ಸಮಾವೇಶ ಸಮಿತಿ ಅಧ್ಯಕ್ಷ ಟಿ.ವಿ. ಮೋಹನ್‌ದಾಸ್ ಪೈ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಡಿಯಾ ಎಟ್ 2024: ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ. ಮಾನವ ಬಂಡವಾಳ’ ಎಂಬ ಶೀರ್ಷಿಕೆಯಡಿ ಸಮಾವೇಶ ಆಯೋಜಿಸಲಾಗಿದೆ. 2047ಕ್ಕೆ ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ವರ್ಷ ಆಚರಿಸಲಿದ್ದು, ಈ ಸಂದರ್ಭದಲ್ಲಿ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ಗುರಿಯಿಂದ ಹೆಚ್ಚು ನುರಿತ ಮತ್ತು ವಿದ್ಯಾವಂತ ಉದ್ಯೋಗಿಗಳ ಸೃಷ್ಟಿ 1.4 ಶತ ಕೋಟಿ ಜನಸಂಖ್ಯೆಯೊಂದಿಗೆ ಪ್ರಾಥಮಿಕ ಶಾಲೆಗಳಿಂದ ಉನ್ನತ ಶಿಕ್ಷಣದವರೆಗೆ ಗುಣಮಟ್ಟದ ಶಿಕ್ಷಣ ಖಾತ್ರಿಪಡಿಸಿ, ಭವಿಷ್ಯದ ಪೀಳಿಗೆಯನ್ನು ಸಿದ್ಧಪಡಿಸಬೇಕಿದೆ. ದೇಶ ಎದುರಿಸುತ್ತಿರುವ ಇಂತಹ ಪ್ರಮುಖ ಸವಾಲುಗಳನ್ನು ಎದುರಿಸಲು ಸಮಾವೇಶದಲ್ಲಿ ಚರ್ಚೆ ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಂಆರ್‌ಪಿಎಲ್‌ನ ಮಾನವ ಸಂಪನ್ಮೂಲ ಎಚ್‌ಆರ್ ವಿಭಾಗದ ಸಮೂಹ ಮಹಾಪ್ರಬಂಧಕ ಕೃಷ್ಣಹೆಗಡೆ ಎಂ., ಎನ್‌ಐಪಿಎಂ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಡಾ| ಎಂ. ಎಚ್. ರಾಜಾ, ಪ್ರಧಾನ ಕಾರ್ಯದರ್ಶಿ ಪಿ.ಆ‌ರ್. ಬಸವರಾಜು, ಎನ್‌ಐಪಿಎಂ ಮಂಗಳೂರು ಚಾಪ್ಟರ್ ಅಧ್ಯಕ್ಷ ಸ್ಟೀವನ್ ಪಿಂಟೊ, ಸಂಘಟನ ಸಮಿತಿ ಅಧ್ಯಕ್ಷ ಪಿ.ಪಿ.ಶೆಟ್ಟಿ ಕಾರ್ಯದರ್ಶಿ ಡಾ| ಆಶಾ ಅಲ್ಟುಕುರ್ಕ್ ಪೈ, ಎನ್‌ಐಪಿಎಂ ಕಾರ್ಯದರ್ಶಿ ಡಾ| ಲಕ್ಷ್ಮೀಶ್ ರೈ, ಸಮಾವೇಶ ಸಮಿತಿ ಅಧ್ಯಕ್ಷ ಡಾ| ಸೆಬಾಸ್ಟಿನ್ ಕೆ.ವಿ. ಉಪಸ್ಥಿತರಿದ್ದರು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್