ನಡುರಸ್ತೆಯಲ್ಲಿ ನಮಾಜ್ ಪ್ರಕರಣ : ಬಿ ರಿಪೋರ್ಟ್ ರದ್ದು ಪಡಿಸಲು ವಿಶ್ವ ಹಿಂದೂ ಪರಿಷದ್ ಮನವಿ

ಮಂಗಳೂರು : ನಡು ರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣಕ್ಕೆ ಹಾಕಿದ ”B” ರಿಪೋರ್ಟ್ ರದ್ದು ಪಡಿಸಿ ಶರಣ್ ಪಂಪ್ವೆಲ್ ವಿರುದ್ದ ದಾಖಲಿಸಿದ ಪ್ರಕರಣ ರದ್ದು‌ಗೊಳಿಸಲು ವಿಶ್ವ ಹಿಂದೂ ಪರಿಷದ್ ಮಂಗಳೂರು ವತಿಯಿಂದ ಮನವಿ ಸಲ್ಲಿಸಲಾಯಿತು.

ಮಂಗಳೂರಿನ ಕಂಕನಾಡಿ ಬಳಿ ಅನುಮತಿ ರಹಿತ ನಮಾಜ್ ಮಾಡಿದ ಪ್ರಕರಣಕ್ಕೆ ಹಾಕಿದ ಬಿ ರಿಪೋರ್ಟ್ ರದ್ದು ಪಡಿಸಲು ಮತ್ತು ಕರ್ನಾಟಕ ಸರಕಾರ ದ್ವೇಷ ರಾಜಕಾರಣ ಮಾಡಿ ಹಿಂದೂ ನಾಯಕ ಶರಣ್ ಪಂಪ್‌ವೆಲ್‌ರವರನ್ನು ಗುರಿಯಾಗಿಸಿ ದಾಖಲಿಸಿದ ಪ್ರಕರಣ ವಾಪಾಸ್ ಪಡೆಯಲು ಹಾಗೂ ಸದ್ರಿ ಪ್ರಕರಣದಲ್ಲಿ ಕಡ್ಡಾಯ ರಜೆಯಲ್ಲಿ ಕಳುಹಿಸಿದ ಪೊಲೀಸ್ ಅಧಿಕಾರಿಯ ಕಡ್ಡಾಯ ರಜೆ ರದ್ದುಪಡಿಸಲು ಆಗ್ರಹಿಸಿ ಮಾನ್ಯ ಜೆಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ವಿಶ್ವ ಹಿಂದೂ ಪರಿಷದ್ ಮಂಗಳೂರು ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುಷೋತ್ತಮ, ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಜಿಲ್ಲಾ ಸಹಕಾರ್ಯದರ್ಶಿ ಗುರುಪ್ರಸಾದ್ ಹಾಗು ಜಿಲ್ಲಾ ಸಂಯೋಜಕ್ ನವೀನ್ ಮೂಡುಶೆಡ್ಡೆ ಉಪಸ್ಥಿತರಿದ್ದರು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು