ಪದುವಾ ಜಂಕ್ಷನ್‌ನಲ್ಲಿನ ಮಿಯಾವಾಕಿ ಅರಣ್ಯ ತೆರವಿಗೆ ಮುಂದಾದ ಎನ್ಎಎಚ್ – ಹೈಕೋರ್ಟ್ ತಡೆ

ಮಂಗಳೂರು : ವನ ಚಾರಿಟೇಬಲ್ ಟ್ರಸ್ಟ್, ಸಿಂಜಿನ್ ಇಂಟರ್ ನ್ಯಾಶನಲ್ ಲಿ. ಮತ್ತು ಬಯೋಕೊನ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನಗರದ ಪದುವಾ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಬೆಳೆಸಲಾಗಿದ್ದ ಮಿಯಾವಾಕಿ ಅರಣ್ಯವನ್ನು ತೆರವುಗೊಳಿಸಬೇಕೆಂದಿದ್ದ ಎನ್ಎಎಚ್ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

2022ರಲ್ಲಿ ಮನಪಾದ ಬಯೋಕೊನ್ ಹಾಗೂ ಸಿಂಜಿನ್ ಇಂಟರ್ನ್ಯಾಶನಲ್ ಲಿಮಿಟೆಡ್ ಸಂಸ್ಥೆಗಳನ್ನು ಸಂಪರ್ಕಿಸಿ ಸಿ.ಎಸ್.ಆರ್. ಫಂಡಿಂಗ್ ಮೂಲಕ ಮಂಗಳೂರಿನಲ್ಲಿ ಮೀಯಾವಾಕಿ ಅರಣ್ಯ ಸ್ಥಾಪಿಸಲು ಬೇಡಿಕೆ ಇಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪದುವಾ ಜಂಕ್ಷನ್ ಬಳಿ ನಿಗದಿತ ಸ್ಥಳವನ್ನು ಮಂಜೂರು ಮಾಡಿ ಮನಪಾ ಆದೇಶಿಸಿತ್ತು. ಅದರಂತೆ ಮಂಗಳೂರಿನ ವನ ಚಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ಈ ಪ್ರದೇಶದಲ್ಲಿ 1000ಕ್ಕಿಂತಲೂ ಅಧಿಕ ಗಿಡಗಳನ್ನು ನೆಟ್ಟು ಪಾಲನೆ ಮಾಡಲಾಗುತ್ತಿತ್ತು.

ಆದರೆ ಎನ್ಎಎಚ್ ಈ ಸ್ಥಳವು ತನಗೆ ಸೇರಿದ್ದು ಅಲ್ಲಿ ಬೆಳೆಸಿರುವ ಮರಗಳನ್ನು ಕಡಿದು ತೆರವುಗೊಳಿಸುವಂತೆ ಆದೇಶಿಸಿತ್ತು. ಸಿಂಜಿನ್ ಇಂಟರ್ ನ್ಯಾಷನಲ್ ಲಿ., ಬಯೊಕೊನ್ ಫೌಂಡೇಷನ್ ಹಾಗೂ ಮಂಗಳೂರಿನ ವನ ಚಾರಿಟೇಬಲ್ ಟ್ರಸ್ಟ್ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ಮೊಹಮ್ಮದ್ ನವಾಝ್‌ರವರ ಪೀಠ ಅರ್ಜಿಯನ್ನು ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

ವಾದಿಗಳ ಪರವಾಗಿ ಬೆಂಗಳೂರಿನ ವಕೀಲರಾದ ಅಶ್ವಿನ್ ಕುಟಿನ್ಹ, ಆರ್.ಪಿ ಡಿಸೋಜ ಅಸೋಸಿಯೇಟ್ಸ್‌ರವರು ವಾದ ಮಂಡಿಸಿದ್ದಾರೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು