ಕಾಪು ಅಮ್ಮನಿಗೆ ಮುಸಲ್ಮಾನರಿಂದ ಹೊರೆ ಕಾಣಿಕೆ : ಸೌಹಾರ್ದ ಸಂದೇಶ

ಕಾಪು : ಉಡುಪಿಯ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಅದ್ಧೂರಿಯಾಗಿ ಬ್ರಹ್ಮ ಕಲಶೋತ್ಸವ ನಡೆಯುತ್ತಿದೆ. ಹತ್ತು ದಿನಗಳ ಕಾಲ ನಡೆಯುವ ಈ ಮಹೋತ್ಸವದ ವೇಳೆ ಪ್ರತಿದಿನ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

ಅನ್ನ ಸಂತರ್ಪಣೆಗೆಂದು ಹೊರೆ ಕಾಣಿಕೆಯನ್ನು ಭಕ್ತರು ನೀಡುತ್ತಿದ್ದಾರೆ. ಇದೀಗ ಎಲ್ಲಾ ಸಮುದಾಯಗಳ ಜೊತೆಗೆ ಮುಸ್ಲಿಮರು ಕೂಡ ಹೊರೆ ಕಾಣಿಕೆ ಸಮರ್ಪಿಸಿದ್ದಾರೆ. ಕಾಪು ತಾಲೂಕಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ ಸಮುದಾಯದವರು, ಈ ಮೂಲಕ ಮಾರಿಗುಡಿಯ ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗಿದ್ದಾರೆ. ಮುಸ್ಲಿಂ ಸಮುದಾಯದವರು ಹೊರೆ ಕಾಣಿಕೆ ನೀಡುವ ಮೂಲಕ, ಹೊಸ ಸೌಹಾರ್ದದ ಸಂದೇಶ ಸಾರಿದ್ದಾರೆ. ಅಂದಾಜು 30 ಕೋಟಿ ವೆಚ್ಚದಲ್ಲಿ ಕಾಪು ಹೊಸ ಮಾರಿಗುಡಿಯ ಮೊದಲ ಹಂತದ ದೇವಾಲಯ ಅಭಿವೃದ್ಧಿ ಕಾರ್ಯ ನಡೆದಿದೆ.

Related posts

ಅಪ್ತಿ ಆಚಾರ್ಯ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ

ನಾಗರಿಕ ಸಮಿತಿಯ ನೇತೃತ್ವದಲ್ಲಿ ಅಪರಿಚಿತ ಶವದ ಅಂತ್ಯ ಸಂಸ್ಕಾರ

ದಲಿತ ಚಿಂತಕ ಜಯನ್ ಮಲ್ಪೆಗೆ ರಾಜ್ಯ ಸರಕಾರದಿಂದ ಡಾ|ಬಾಬು ಜಗಜೀವನ ರಾಂ ಪ್ರಶಸ್ತಿ