ಜೂ.9 ರಂದು ಝೇಂಕಾರ ಟ್ರೂಪ್‌ನಿಂದ ಸಂಗೀತ ಮಹೋತ್ಸವ

ಉಡುಪಿ : ಸಂಗೀತ ಕ್ಷೇತ್ರದಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎನ್ನುವ ಸದಾಶಯದಿಂದ ರೂಪುಗೊಂಡ ಉಡುಪಿಯ ಝೇಂಕಾರ ಟ್ರೂಪ್‌ನ 10ನೇ ವಾರ್ಷಿಕೋತ್ಸವ ಜೂ.9 ರಂದು ಉಡುಪಿಯ ಪುರಭವನದಲ್ಲಿ ನಡೆಯಲಿದೆ.

ಸಂಸ್ಥೆಯ ಚೇತನ್ ನಾಯಕ್, ವಿಠಲ್ ನಾಯಕ್‌ರವರು ಸುದ್ದಿಗೋಷ್ಠಿ ನಡೆಸಿ ಬೆಳಗ್ಗೆ 8.45 ರಿಂದ ರಾತ್ರಿ 9 ಗಂಟೆಯವೆರೆಗೆ ಪ್ರಸಿದ್ಧ ಸಂಗೀತಜ್ಞರುಗಳಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9 ಕ್ಕೆ ಉದಯ ರಾಗ ಕಾರ್ಯಕ್ರಮದಲ್ಲಿ ಸಮೀರ್ ರಾವ್ ಅವರಿಂದ ಕೊಳಲು ವಾದನ ನಡೆಯಲಿದೆ. ಬೆಳಗ್ಗೆ 10.45 ಕ್ಕೆ ದಾಸವಾಣಿ ಕಾರ್ಯಕ್ರಮದಲ್ಲಿ ಶಂಕರ್ ಶಾನುಬೋಗ್ ಅವರಿಂದ ಹಾಡುಗಾರಿಕೆ, ಮದ್ಯಾಹ್ನ 1.45 ಕ್ಕೆ ಅವಧೂತ್ ಗಾಂಧಿ ಹಾಗೂ ತಂಡದವರಿಂದ ಮಹಾರಾಷ್ಟ್ರದ ಋಷಿ ಸಾಹಿತ್ಯದಲ್ಲಿ ಜಾನಪದ ಸಂಗೀತ ಬಗ್ಗೆ, ಅಪರಾಹ್ನ 3.30 ಕ್ಕೆ ಸ್ವರಾಂಜಲಿ ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಬೆಳ್ಮಣ್ಣು ಅವರಿಂದ ಹಿಂದೂಸ್ತಾನಿ ಸಂಗೀತ, ಸಂಜೆ 5.30ಕ್ಕೆ ಅಭಿನಂದನಾ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಗೀತ ಗುರುಗಳಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ 7 ಗಂಟೆಗೆ ನಾದ ಝೇಂಕಾರ ಕಾರ್ಯಕ್ರಮದಲ್ಲಿ ವಿದುಷಿ ಸೂರ್ಯಗಾಯತ್ರಿ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಂಗೀತಾಸಕ್ತರಿಗೆ ಉಚಿತ ಪ್ರವೇಶವಿದೆ ಎಂದು ತಿಳಿಸಿದರು.

10 ವರ್ಷಗಳ ಹಿಂದೆ ಉಡುಪಿ ತೆಂಕಪೇಟೆಯ ಶ್ರೀ ಲಕ್ಷಿ ವೆಂಕಟೇಶ ದೇವಳದಲ್ಲಿ 8 ಮಂದಿ ಸಮಾನ ಮನಸ್ಕರಿಂದ ಆರಂಭಗೊಂಡ ಈ ಸಂಸ್ಥೆಯಲ್ಲಿ ಇಂದು 25 ಮಂದಿ ಸದಸ್ಯರಿದ್ದು, ಭಜನೆ, ಸಂಗೀತ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸದಸ್ಯರುಗಳಾದ ಕಾರ್ತಿಕ್ ನಾಯಕ್, ಪ್ರಸಾದ್ ಶೆಣೈ, ಶ್ರೀಶ ಶೆಣೈ ಹಾಗೂ ಸಂದೀಪ್ ನಾಯಕ್ ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ