ಮುರಳೀಧರ್ ಭಟ್‌ರವರಿಗೆ “ವಿಪ್ರ ಛಾಯಾ ಸಾಧಕ” ಪುರಸ್ಕಾರ

ಉಡುಪಿ : ಛಾಯಾಚಿತ್ರ ಕಲಾವಿದ ಮುರಳೀಧರ್ ಭಟ್ ಕೊಡವೂರು ಇವರಿಗೆ ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ “ವಿಪ್ರ ಛಾಯಾ ಸಾಧಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಕಳೆದ ಹಲವಾರು ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ವಲಯ ಬ್ರಾಹ್ಮಣ ಮಹಾಸಭಾದ ಎಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಛಾಯಾಗ್ರಹಣ ಮಾಡುತ್ತಿದ್ದಾರೆ.  

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶ್ರೀನಿವಾಸ ತೋಡತ್ತಿಲ್ಲಾಯ, ಸುಬ್ರಹ್ಮಣ್ಯ ಉಪಾಧ್ಯಾಯ, ವಿಪ್ರ ಸೇನಾನಿ ಗಣೇಶ್ ಅಡಿಗ, ದಿನಕರ ರಾವ್ ಸಂಘದ ಅಧ್ಯಕ್ಷ ಸುರೇಂದ್ರ ಉಪಾಧ್ಯಾಯ, ಗೌರವಾಧ್ಯಕ್ಷರುಗಳಾದ ಗೋವಿಂದ ಐತಾಳ್, ಗುರುರಾಜ್ ರಾವ್, ಕಾರ್ಯದರ್ಶಿ ಪ್ರವೀಣ್ ಬಲ್ಲಾಳ್, ಕೋಶಾಧಿಕಾರಿ ಚಂದ್ರಶೇಖರ್ ರಾವ್ ಜೊತೆ ಕೋಶಾಧಿಕಾರಿ ಶ್ರೀಧರ ಶರ್ಮ ಹಾಗೂ ಕಲ್ಪನಾ ಭಟ್ ಉಪಸ್ಥಿತರಿದ್ದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ