ವೆನ್‌ಲಾಕ್, ಪಿಲಿಕುಲ ಅಭಿವೃದ್ಧಿಗೆ ಎಂ.ಆರ್.ಪಿ.ಎಲ್. ವತಿಯಿಂದ ನೆರವು ಹಸ್ತಾಂತರ

ಮಂಗಳೂರು : ಎಂ.ಆರ್.ಪಿ.ಎಲ್. ಸಂಸ್ಥೆ ವತಿಯಿಂದ ಸಿ‌ಎಸ್‌ಆರ್ ನಿಧಿಯಿಂದ ವೆನ್‌ಲಾಕ್ ಆಸ್ಪತ್ರೆ ಹಾಗೂ ಪಿಲಿಕುಲ ನಿಸರ್ಗಧಾಮಕ್ಕೆ ಕೊಡುಗೆ ನೀಡಲಾಯಿತು.

ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರು ಸಿಎಸ್ಆರ್ ಪತ್ರವನ್ನು ಅಧಿಕಾರಿಗಳಿಗೆ ವಿತರಿಸಿದರು.

ಈ ನಿಧಿಯಿಂದ ವೆನ್‌ಲಾಕ್ ಆಸ್ಪತ್ರೆಯ ಮೆಡಿಸಿನ್ ಬ್ಲಾಕ್‌ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನೂತನವಾದ ಸರ್ಜಿಕಲ್ ವಾಡ್೯ ನಿರ್ಮಾಣಗೊಳ್ಳಲಿದ್ದು, ಹೊಸದಾಗಿ 132 ಹಾಸಿಗೆಗಳು ಸೇರ್ಪಡೆಗೊಳ್ಳಲಿವೆ.

ಪಿಲಿಕುಲ ವಿಜ್ಞಾನ ಕೇಂದ್ರ ಆವರಣದಲ್ಲಿ ರೂ. 5.43 ಕೋಟಿ ವೆಚ್ಚದಲ್ಲಿ ಖಗೋಳ ಶಾಸ್ತ್ರ ಗ್ಯಾಲರಿ ನಿರ್ಮಾಣಗೊಳ್ಳಲಿದೆ.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಎಂಆರ್‌ಪಿಎಲ್ ಎಂಡಿ ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್, ವೆನ್‌ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಪಿಲಿಕುಲ ಆಯುಕ್ತ ಅರುಣ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್‌ಗೆ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರದಾನ

ಕೋಳಿ ಅಂಕದ ವಿಚಾರ ಮತ್ತೆ ಮುನ್ನೆಲೆಗೆ; ಉಡುಪಿ ಶಾಸಕರಿಗೆ ಕಾಂಗ್ರೆಸ್ ಟಾಂಗ್!

ಕ್ರೈಸ್ತ ವಿದ್ಯಾರ್ಥಿನಿಯ ಆಪಹರಣ ಹಾಗೂ ಲವ್ ಜಿಹಾದ್ ಪ್ರಕರಣ – ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಆಕ್ರೋಶ