ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿದ ಸಂಸದ ಕೋಟ; ಎನ್ಐಎ ತನಿಖೆಗೆ ಒತ್ತಾಯ

ಉಡುಪಿ : ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿದರು. ಶಾಸಕರಾದ ರಾಜೇಶ್ ನಾಯ್ಕ್‌ರವರೊಂದಿಗೆ ಭೇಟಿ ನೀಡಿದ ಸಂಸದ ಕೋಟ, ಸುಹಾಸ್ ಶೆಟ್ಟಿ ಅವರ ತಂದೆ ತಾಯಿ ಮತ್ತು ಅವರ ಸಹೋದರರನ್ನು ಭೇಟಿಯಾದರು.

ಈ ಸಂದರ್ಭದಲ್ಲಿ ಅವರ ತಾಯಿ ಕೋಟ ಶ್ರೀನಿವಾಸ ಪೂಜಾರಿಯವರ ಬಳಿ ಸರ್ಕಾರವು ತನ್ನ ಮಗನನ್ನು ನಡೆಸಿಕೊಂಡ ರೀತಿಯ ಬಗ್ಗೆ ಬೇಸರ ತೋಡಿಕೊಂಡರು. ಸುಮಾರು 20 ದಿನಗಳಿಂದ ಸುಭಾಸ್ ಶೆಟ್ಟಿಯನ್ನು ಪದೇ ಪದೇ ಪರಿಶೀಲಿಸಿ ಆತನ ಕಾರು ತಪಾಸಣೆ ಮಾಡಿ ಆತನನ್ನು ನಿಶಸ್ತ್ರಗೊಳಿಸುವಂತೆ ಮಾಡಿದ್ದರು. ಯಾವುದೇ ಶಸ್ತ್ರಾಸ್ತ್ರವನ್ನು ಇಟ್ಟುಕೊಳ್ಳದ ಹಾಗೆ ಪ್ರಯಾಣಿಸುವ ಬಗ್ಗೆ ಸರ್ಕಾರವು ತನ್ನ ಮಗನನ್ನು ಕೊಲ್ಲಲು ಪರೋಕ್ಷವಾಗಿ ಸಹಕರಿಸಿದೆ. ಠಾಣೆಗೆ ಕರೆಸಿ ಯಾವುದೇ ಕಾರಣಕ್ಕೂ ಯಾವುದೇ ಶಸ್ತ್ರಾಸ್ತ್ರವನ್ನು ಇಟ್ಟುಕೊಂಡರೆ ಜೈಲಿಗೆ ಅಟ್ಟುತ್ತೇವೆ ಎಂಬ ಬೆದರಿಕೆಯನ್ನು ಪೊಲೀಸರ ಮೂಲಕ ಸರ್ಕಾರವು ಹಾಕಿತ್ತು. ಹೀಗಾಗಿ ಆತನನ್ನು ಕೊಲೆ ಮಾಡಲು ಹಂತಕರಿಗೆ ಸುಲಭವಾಯಿತು. ಕನಿಷ್ಠ ಉಸ್ತುವಾರಿ ಸಚಿವರು ಮತ್ತು ಗೃಹ ಸಚಿವರು ಮಂಗಳೂರಿಗೆ ಬಂದಿದ್ದರೂ ಮನೆಗೆ ಬಾರದೆ ಒಂದು ಸಾಂತ್ವನ ಹೇಳುವ ಕನಿಷ್ಠ ಕೆಲಸವನ್ನು ಮಾಡಲಿಲ್ಲ. ಅದರ ಬದಲು ಮುಸ್ಲಿಂ ಮುಖಂಡರು ಹೇಳಿದಂತೆ ಸರ್ಕಾರ ಕುಣಿಯುತ್ತಿದೆ ಎಂದು ಸುಹಾಸ್ ಕುಟುಂಬಸ್ಥರು ಬೇಸರ ತೋಡಿಕೊಂಡರು.

ಎಲ್ಲಾ ಹೇಳಿಕೆಗಳನ್ನು ಗಮನಿಸಿದ ಸಂಸದರು ನಿಶ್ಚಯವಾಗಿ ಈ ಪ್ರಕರಣವನ್ನು ಎನ್ಐಎ‌ಗೆ ಒಳಪಡಿಸುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.

Related posts

ಸಿಪಿಎಂ ಕಾರ್ಯದರ್ಶಿ ಮೇಲೆ ದುರುದ್ದೇಶಪೂರಿತ ಎಫ್ಐಆರ್ – ಖಂಡನೆ

ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ, ಸಿಬಂದಿ ಕನ್ನಡದಲ್ಲೇ ವ್ಯವಹರಿಸುವ ಕಾನೂನು ಅಗತ್ಯ – ಸಚಿವರಿಗೆ ಸಂಸದ ಕೋಟ ಪತ್ರ