ತಾಯಿ-ಮಗ ಜತೆಯಾಗಿ ವಿಷ ಸೇವನೆ : ಮಗ ಸಾವು; ತಾಯಿ ಸ್ಥಿತಿ ಗಂಭೀರ..

ಸುಳ್ಯ : ಜತೆಯಾಗಿ ಇಲಿ ಪಾಷಾಣ ಸೇವಿಸಿ ತಾಯಿ ಮತ್ತು ಮಗ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಈ ಪೈಕಿ ಮಗ ಸಾವನ್ನಪ್ಪಿ ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ನಡುಗಲ್ಲು ಎನ್ನುವಲ್ಲಿ ರವಿವಾರ ಸಂಭವಿಸಿದೆ.

ನಾಲ್ಕೂರು ಗ್ರಾಮದ ದೇರಪ್ಪಜ್ಜನಮನೆ ನಿವಾಸಿ ಕುಶಾಲಪ್ಪ ಗೌಡ ಅವರ ಮಗ ನಿತಿನ್‌ (32) ಮೃತಪಟ್ಟಿದ್ದು, ಅವರ ತಾಯಿ ಸುಲೋಚನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿದ್ದಾರೆ ಎನ್ನಲಾಗಿದ್ದು, ರವಿವಾರ ಮುಂಜಾನೆ ಇಬ್ಬರೂ ಅಸ್ವಸ್ಥಗೊಂಡಿದ್ದರು.

ಮೃತ ನಿತಿನ್‌ ಐಟಿಐ ವಿದ್ಯಾಭ್ಯಾಸ ಹೊಂದಿದ್ದು, ತಮ್ಮ ಜಮೀನಿನಲ್ಲಿ ಕೃಷಿಕರಾಗಿ ದುಡಿಯುತ್ತಿದ್ದರು. ಒಂದು ವರ್ಷದ ಹಿಂದೆ ದೀಕ್ಷಾ ಅವರನ್ನು ವಿವಾಹವಾಗಿದ್ದು, ಅವರು ಸ್ಥಳೀಯ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದರು. ದೀಕ್ಷಾ ತವರು ಮನೆಗೆ ಹೋಗಿದ್ದು, ಈ ಸಂದರ್ಭದಲ್ಲಿ ತಾಯಿ ಸುಲೋಚನಾ ಹಾಗೂ ಮಗ ನಿತಿನ್‌ ವಿಷ ಸೇವಿಸಿದ್ದರು.

ಸ್ಥಳೀಯವಾಗಿ ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದ ನಿತಿನ್‌ ಎಲ್ಲರೊಡನೆ ಆತ್ಮೀಯವಾಗಿದ್ದರು. ನಿತಿನ್‌ ತಂದೆ ಕುಶಾಲಪ್ಪ ಗೌಡರ ಆರೋಗ್ಯವೂ ಸುಸ್ಥಿರವಾಗಿಲ್ಲ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Related posts

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

ಸಿಪಿಎಂ ಕಾರ್ಯದರ್ಶಿ ಮೇಲೆ ದುರುದ್ದೇಶಪೂರಿತ ಎಫ್ಐಆರ್ – ಖಂಡನೆ