ಸೋಲಿನ ನೈತಿಕ ಹೊಣೆ ಹೊರುವೆ, ಒಂದುವರೆ ವರ್ಷದಲ್ಲೇ ಪಕ್ಷ ಸಂಘಟಿಸಿ ಬಲಿಷ್ಠಗೊಳಿಸುವೆ – ಪದ್ಮರಾಜ್

ಮಂಗಳೂರು : ಚುನಾವಣೆಯಲ್ಲಿ ನನ್ನ ಸೋಲಿಗೆ ಯಾರನ್ನೂ ದೂಷಿಸುವುದಿಲ್ಲ. ಸೋಲಿನ ನೈತಿಕ ಹೊಣೆಯನ್ನು ನಾನೇ ಹೊರುತ್ತೇನೆ‌. ಆದರೆ ಇನ್ನು ಮುಂದೆ ಸುಮ್ಮನೆ ಕೂರೊದಿಲ್ಲ. ಎಲ್ಲಾ ಬೂತ್‌ಗಳಿಗೆ ಹೋಗಿ ಮುಂದಿನ ಒಂದುವರೆ ವರ್ಷದಲ್ಲೇ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತೇನೆ. ಒಳ್ಳೆಯ ಕೆಲಸ ಯಾರು ಮಾಡಿದರೂ ಅನುಕರಣೆ ಮಾಡಬೇಕು. ಆದ್ದರಿಂದ ಬಿಜೆಪಿಯ ಸಂಘಟನೆಯ ಮಾದರಿಯಲ್ಲೇ ಪಕ್ಷ ಬಲಿಷ್ಠ ಮಾಡುವ ಕಾರ್ಯ ಮಾಡಲಿದ್ದೇವೆ ಎಂದು ದ.ಕ‌.ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಿಗೆ ಹೋಗಿ ಸರಿಯಾಗಿ ಪ್ರಚಾರ ಮಾಡಲು ಸಾಧ್ಯವಾಗದಿರುವುದೇ ತನಗೆ ಮತ ಕಡಿಮೆಯಾಗಲು ಕಾರಣ. ನಾನು ಸೋತರೂ ರಾಷ್ಟ್ರಮಟ್ಟದ ನಾಯಕರು ನನಗೆ ಕರೆ ಮಾಡಿ ಧೈರ್ಯ ತುಂಬಿರುವುದು ಸಂತಸ ತಂದಿದೆ ಎಂದರು.

ಕಾಂಗ್ರೆಸ್ ಪಕ್ಷ ಸಂಘಟನೆ ಸ್ವಲ್ಪ ದುರ್ಬಲವಾಗಿದ್ದು, ಮುಂದಿನ ಒಂದು ವರ್ಷದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಸಂಸದ ಬ್ರಿಜೇಶ್ ಚೌಟರಲ್ಲಿ ಹೇಳುವುದೇನೆಂದರೆ ತಾವು ದ.ಕ.ಜಿಲ್ಲೆಯ ಅಭಿವೃದ್ಧಿಗೋಸ್ಕರ ಏನೇ ಕೆಲಸ ಮಾಡಿದರೂ ನಾನು ನಿಮ್ಮೊಂದಿಗೆ ಇರಲಿದ್ದೇನೆ‌. ಅದರೊಂದಿಗೆ ಜಿಲ್ಲೆಯ ಸಾಮರಸ್ಯ ಗತವೈಭವವನ್ನು ಮರಳಿ ತರುವಲ್ಲಿ ತಮ್ಮ ಸಹಕಾರವೂ ಅಗತ್ಯ ಎಂದು ಹೇಳಿದರು.

ಚುನಾವಣಾ ಪೂರ್ವದಲ್ಲಿ ದ.ಕ. ಜಿಲ್ಲೆಯಲ್ಲಿ ಅಯೋಧ್ಯೆಯ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿತ್ತು. ಆದರೆ ಅಯೋಧ್ಯೆಯ ಜನತೆ ಬಿಜೆಪಿಯನ್ನು ತಿರಸ್ಕರಿಸಿದರು. ಆದರೆ ಜಿಲ್ಲೆಯ ಜನತೆ ಇನ್ನೂ ಅಯೋಧ್ಯೆ ಅನ್ನುತ್ತಿದ್ದಾರೆ. ಆದ್ದರಿಂದ ಇಲ್ಲಿನವರು ಬುದ್ಧಿವಂತರೇ? ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಲಾರಂಭಿಸಿದೆ ಎಂದು ಪದ್ಮರಾಜ್ ಆರ್ ಪೂಜಾರಿ ಹೇಳಿದರು.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ