ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆ ಬಿರುಸು; 24 ಗಂಟೆಯಲ್ಲಿ ಸರಾಸರಿ 48ಮಿ.ಮೀ. ಮಳೆ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಇವತ್ತು ಮುಂಗಾರು ಮಳೆ ಬಿರುಸು ಪಡೆದುಕೊಂಡಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 48 ಮಿಲಿ ಮೀಟರ್ ಮಳೆಯಾಗಿದೆ. ತಾಲೂಕು ಮಳೆ ವಿವರ ನೋಡುವುದಾದರೆ, ಕಾರ್ಕಳದಲ್ಲಿ 45, ಕುಂದಾಪುರ 53, ಉಡುಪಿ ತಾಲೂಕಿನಲ್ಲಿ 37 ಮಿಲಿಮೀಟರ್ ಮಳೆ ಬಿದ್ದಿದೆ. ಜಿಲ್ಲೆಯಲ್ಲೇ ಬೈಂದೂರಲ್ಲಿ ಅತೀ ಹೆಚ್ಚು 58 ಮಿಲಿಮೀಟರ್, ಬ್ರಹ್ಮಾವರ 46- ಕಾಪು 45 ಆಗುಂಬೆ ತಪ್ಪಲು ಹೆಬ್ರಿಯಲ್ಲಿ 43 ಮಿಲಿಮೀಟರ್ ಮಳೆಯಾಗಿದೆ.

ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಬುಧವಾರ, ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಭಾರೀ ಮಳೆ ಬೀಳುವ ಮುನ್ಸೂಚನೆ ನೀಡಿದೆ. ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಮತ್ತು ಸ್ಥಳೀಯರಿಗೆ ಸಂದೇಶ ರವಾನಿಸಲಾಗಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ