ಹದಿನಾಲ್ಕು ಪಟ್ಣ ಮೋಗವೀರ ಮಹಾಜನ ಸಂಘ ಮಹಾಸಭೆ, ಪ್ರತಿಭಾ ಪುರಸ್ಕಾರ, ಗುರಿಕಾರರಿಗೆ ಗೌರವಧನ ವಿತರಣೆ

ಉಡುಪಿ : ಹದಿನಾಲ್ಕು ಪಟ್ಣ ಮೋಗವೀರ ಮಹಾಜನ ಸಂಘ (ರಿ.) ಪಿತ್ರೋಡಿ ಉದ್ಯಾವರ ಇದರ ಆಶ್ರಯದಲ್ಲಿ ದಿ| ಯು. ಸದಿಯ ಸಾಹುಕಾರರ ಸ್ಮರಣಾರ್ಥ ಇಂದು ನಡೆದ 14 ಗ್ರಾಮ ಸಭೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗುರಿಕಾರರಿಗೆ ಗೌರವಧನ ವಿತರಣೆ ಮತ್ತು ಮಹಾಸಭೆಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ 14 ಪಟ್ಣ ಮೋಗವೀರ ಮಹಾಜನ ಸಂಘದ ಅಧ್ಯಕ್ಷರಾದ ಕೇಶವ ಎಂ. ಕೋಟ್ಯಾನ್, ಸಾಹುಕಾರ್ ಕ್ಯಾನಿಂಗ್ ಕಂ. ಮಾಲಕರಾದ ಯು. ಗಣೇಶ್, ಉಡುಪಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಅಶೋಕ್, ಗುರಿಕಾರರಾದ ಸದಾರಾಮ್ ಮೆಂಡನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ