ಉಡುಪಿ ನಗರಸಭೆ ವಿವಿಧ ಬೇಡಿಕೆಗಳ ಬಗ್ಗೆ ಪೌರಾಡಳಿತ ಸಚಿವ ರಹೀಂ ಖಾನ್‌ರವರಿಗೆ ಶಾಸಕ ಯಶ್‌ಪಾಲ್ ಸುವರ್ಣ ಮನವಿ

ಉಡುಪಿ : ಉಡುಪಿ ಶಾಸಕರಾದ ಶ್ರೀ ಯಶ್‌ಪಾಲ್ ಸುವರ್ಣ‌ರವರು ಪೌರಾಡಳಿತ ಸಚಿವರಾದ ಶ್ರೀ ರಹೀಂ ಖಾನ್ ರವರನ್ನು ಭೇಟಿಯಾಗಿ ಉಡುಪಿ ನಗರಸಭೆಗೆ ಸಂಬಂಧಿತ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಮಾಡಿದರು.

ಉಡುಪಿ ನಗರಸಭೆಗೆ ಪೂರ್ಣಕಾಲಿಕ ಖಾಯಂ ಪೌರಾಯುಕ್ತ ಹುದ್ದೆ ಖಾಲಿ ಇದ್ದು, ಕಳೆದ ಹಲವಾರು ತಿಂಗಳಿನಿಂದ ಪೂರ್ಣಕಾಲಿಕ ಪೌರಾಯುಕ್ತರಿಲ್ಲದೆ ನಗರಸಭೆಯ ಆಡಳಿತಾತ್ಮಕ ಕಾರ್ಯಗಳು ಹಾಗೂ ಸಾರ್ವಜನಿಕರ ದಿನನಿತ್ಯದ ಸೇವೆಗಳಿಗೆ ಸಮಸ್ಯೆಯಾಗುತ್ತಿರುವುದರಿಂದ ಪೂರ್ಣಕಾಲಿಕ ಪೌರಾಯುಕ್ತರನ್ನು ಒದಗಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಉಡುಪಿ ನಗರಸಭೆಯ ನೀರು ಸರಬರಾಜು ಅನುದಾನದಲ್ಲಿ ಲಭ್ಯವಿರುವ ನಿಧಿಯನ್ನು ಸಾಮಾನ್ಯ ನಿಧಿಯಾಗಿ ಸಿವಿಲ್ ಕಾಮಗಾರಿಗಳಿಗೆ ಬಳಸಲು ಸಲ್ಲಿಸಿದ ಪ್ರಸ್ತಾವನೆಗೆ ಶೀಘ್ರಅನುಮೋದನೆ, ನಗರಸಭೆಯ ನೂತನ ಕಛೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಹಾಗೂ ಉಡುಪಿ ನಗರದ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಇಲಾಖೆಯ ಮೂಲಕ ವಿಶೇಷ ಅನುದಾನ ಒದಗಿಸಿ ಸಹಕಾರ ನೀಡುವಂತೆ ಶಾಸಕ ಯಶ್‌ಪಾಲ್ ಸುವರ್ಣ ಸಚಿವರಿಗೆ ಕೋರಿದರು.

ಶಾಸಕರ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು ಶೀಘ್ರದಲ್ಲೇ ನೇಮಕ ಹಾಗೂ ಅನುದಾನ ಬೇಡಿಕೆಯ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು.

Related posts

ಮಲ್ಪೆ ಕಡಲ ತೀರದಲ್ಲಿ ಅಕ್ರಮವಾಗಿ ಸರಕಾರಿ ಜಾಗ ಒತ್ತುವರಿ, ಜಿಲ್ಲಾಡಳಿತದಿಂದ ತೆರವು

ಯಕ್ಷಗಾನ ಬೆಳವಣಿಗೆಗೆ ಮಕ್ಕಳ ಮೇಳಗಳ ಕೊಡುಗೆ ಅನನ್ಯ – ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು

ಜಿಲ್ಲೆಯ ಎಲ್ಲ ಹೋಮ್‌ಸ್ಟೇ, ರೆಸಾರ್ಟ್ಸ್ ಮಾಲಕರ ಸಭೆ ಕರೆದ ಜಿಲ್ಲಾಧಿಕಾರಿ