ಯುವತಿ ನಾಪತ್ತೆ – ಪಬ್ಜಿ ಸಹವಾಸ ಕಾರಣ?

ಮಂಗಳೂರು : ಪಬ್‌ಜಿ ಆನ್‌ಲೈನ್ ಆಟವಾಡುವ ಹವ್ಯಾಸವಿದ್ದ ನಗರದ ಬಿಜೈ ನಿವಾಸಿ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆಲಿಸ್ತಾ ಫೆರಾವೊ(18) ನಾಪತ್ತೆಯಾದ ಯುವತಿ.

ಎಸ್ಎಸ್ಎಲ್‌ಸಿ ಮುಗಿಸಿದ ಬಳಿಕ ಕೆಲಿಸ್ತಾ ಫೆರಾವೊ ಆಟೊಮೊಬೈಲ್ ಕೋರ್ಸ್‌ಗೆ ಸೇರ್ಪಡೆಗೊಂಡಿದ್ದಳು. ಈಕೆಗೆ ಮೊಬೈಲ್‌‌ನಲ್ಲಿ ಪಬ್ಜಿ ಆಟವಾಡುವ ಹುಚ್ಚು ಅಂಟಿಕೊಂಡಿತ್ತು. ಮಂಗಳವಾರ ಮಧ್ಯಾಹ್ನ 12.15ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದಳು. ಈ ವಿಚಾರ ಮನೆಯವರ ಗಮನಕ್ಕೆ ಬಂದ ತಕ್ಷಣ ಹುಡುಕಾಟ ಆರಂಭಿಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದಾಗ ಆಕೆ ಆಟೋರಿಕ್ಷಾದಲ್ಲಿ ಹೋಗುತ್ತಿರುವ ದೃಶ್ಯ ದಾಖಲಾಗಿತ್ತು.

ಈಕೆಗೆ 9ನೇ ತರಗತಿಯಿಂದಲೇ ಪಬ್‌ಜಿ ಆಡುತ್ತಿದ್ದಳು. ಶಾಲೆಯಿಂದ ಮನೆಗೆ ಬಂದ ತಕ್ಷಣ ವೈಫೈ ಬಳಸಿ ಮೊಬೈಲ್‌ನಲ್ಲಿ ಪಬ್‌ಜಿ ಆಡುತ್ತಿದ್ದಳು. ಈ ಬಗ್ಗೆ ಹೆತ್ತವರು ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು. ಇದೇ ವಿಚಾರವಾಗಿ ಹಿಂದೊಮ್ಮೆ ಗಲಾಟೆ ಕೂಡ ನಡೆದಿತ್ತು. ಇತ್ತೀಚೆಗೆ ಮನೆಯವರು ಈಕೆಗೆ ಮೊಬೈಲ್ ಕೊಡಲು ನಿರ್ಧರಿಸಿ ಸಿಮ್ ಖರೀದಿಸಿದ್ದರು ಎಂದು ತಿಳಿದುಬಂದಿದೆ.
ಕೆಲಿಸ್ತಾ ಕನ್ನಡ, ತುಳು, ಇಂಗ್ಲಿಷ್, ಕೊಂಕಣಿ ಭಾಷೆಗಳನ್ನು ಮಾತನಾಡುತ್ತಾಳೆ. ಬಿಳಿ ಟಾಪ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಳು. ಈಕೆಯ ಬಗ್ಗೆ ಮಾಹಿತಿ ದೊರೆತವರು ಬರ್ಕೆ ಪೊಲೀಸ್ ಠಾಣೆ (0824-2220522) ಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Related posts

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ