ಪಡುಬಿದ್ರಿ – ಕಾರ್ಕಳ ರಸ್ತೆಯ ಕಂಚಿನಡ್ಕ ಬಳಿ ಟೋಲ್ ಗೇಟ್ ನಿರ್ಮಾಣ ವಿರೋಧಿಸಿ ಬೃಹತ್ ಜನಾಂದೋಲನ

ಪಡುಬಿದ್ರಿ : ಪಡುಬಿದ್ರಿ – ಕಾರ್ಕಳ ರಸ್ತೆಯ ಕಂಚಿನಡ್ಕ ಬಳಿ ಟೋಲ್ ಗೇಟ್ ನಿರ್ಮಾಣ ವಿರೋಧಿಸಿ ಪಡುಬಿದ್ರಿ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಬೃಹತ್ “ಜನಾಂದೋಲನ ಸಭೆ” ನಡೆಯಿರು. ಸಭೆಯಲ್ಲಿ ಸ್ಥಳೀಯರ ಜೊತೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತಿತರ ಜನಪ್ರತಿನಿಧಿಗಳು ಭಾಗವಹಿಸಿದರು.

ಶಾಸಕರು ಮಾತನಾಡಿ, ಸ್ಥಳೀಯರಿಗೆ ಸಮಸ್ಯೆ ಆಗುವಂತಹ ಟೋಲ್ ಗೇಟ್ ನಮಗೆ ಬೇಡವೇ ಬೇಡ. ಟೋಲ್ ಗೇಟ್ ನಿರ್ಮಾಣ ವಿರೋಧಿಸಿ ನಡೆಯುವ ಹೋರಾಟದಲ್ಲಿ ಜಾತಿ, ಧರ್ಮ, ಪಕ್ಷಬೇಧ ಮರೆತು ನಾವೆಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕು. ಈ ಹೋರಾಟಕ್ಕೆ ಶಾಸಕನಾಗಿ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ