ಅಕ್ಟೋಬರ್ 1 ರಂದು ಆದರ್ಶ ಆಸ್ಪತ್ರೆ, ಉಡುಪಿಯಲ್ಲಿ ಬೃಹತ್ ಉಚಿತ ಹೃದ್ರೋಗ ತಪಾಸಣಾ ಶಿಬಿರ

ಉಡುಪಿ : ವಿಶ್ವ ಹೃದಯ ದಿನದ ಅಂಗವಾಗಿ ಹೃದ್ರೋಗ ತಜ್ಞರಾದ ಡಾ. ಶ್ರೀಕಾಂತ ಕೃಷ್ಣ ಹಾಗೂ ಡಾ. ವಿಶುಕುಮಾರ ಬಿ. ರವರ ನೇತೃತ್ವದಲ್ಲಿ ಬೃಹತ್ ಉಚಿತ ಹೃದ್ರೋಗ ತಪಾಸಣಾ ಶಿಬಿರವು ಅಕ್ಟೋಬರ್ 01, ಮಂಗಳವಾರದಂದು ಆದರ್ಶ ಆಸ್ಪತ್ರೆ, ಉಡುಪಿಯಲ್ಲಿ ಬೆಳಿಗ್ಗೆ 09:30 ರಿಂದ ಮಧ್ಯಾಹ್ನ 1:00 ರವರೆಗೆ ನಡೆಯಲಿದೆ.

ಈ ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ರಕ್ತದ ಸಕ್ಕರೆ ಅಂಶದ ಪರೀಕ್ಷೆ, ರಕ್ತದ ಕೊಬ್ಬಿನಾಂಶದ ಪರೀಕ್ಷೆ, ಇ.ಸಿ.ಜಿ. ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ವೈದ್ಯರ ಸಲಹೆಯ ಮೇರೆಗೆ ಅಗತ್ಯವಿದ್ದಲ್ಲಿ ಹೃದಯದ ಸ್ಯಾನಿಂಗ್ (Echo) ಹಾಗೂ ಟಿ.ಎಂ.ಟಿ. ಪರೀಕ್ಷೆಗಳನ್ನು ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು. ಹೃದಯದ ಆ್ಯಂಜಿಯೋಗ್ರಾಮ್ ಹಾಗೂ ಹೃದಯದ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ಅತ್ಯಂತ ರಿಯಾಯಿತಿ ದರದಲ್ಲಿ ಮಾಡಲಾಗುವುದು ಮತ್ತು “ಹೃದಯಾಘಾತ ಮತ್ತು ಚಿಕಿತ್ಸೆಯ ಬಗ್ಗೆ ತಪ್ಪು ಕಲ್ಪನೆಗಳು” ಎನ್ನುವ ವಿಷಯದ ಬಗ್ಗೆ ಹೃದ್ರೋಗ ತಜ್ಞರಾದ ಡಾ। ಶ್ರೀಕಾಂತ ಕೃಷ್ಣ ರವರಿಂದ ಸ್ಥಿರ ಶೀರ್ಷಿಕೆಗಳ ಮುಖಾಂತರ ಮಾಹಿತಿ ಹಾಗೂ “ಎದೆ ನೋವಿನ ಕಾರಣಗಳು ಮತ್ತು ಪರೀಕ್ಷಾ ವಿಧಾನ” ದ ಬಗ್ಗೆ ಹೃದ್ರೋಗ ತಜ್ಞರಾದ ಡಾ| ವಿಶು ಕುಮಾರ ಬಿ. ಅವರು ಮಾಹಿತಿ ಕಾರ್ಯಗಾರವನ್ನು ನಡೆಸಿಕೊಡಲಿರುವರು.

ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿ ಈ ಶಿಬಿರದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ತಿಳಿಸಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ