ವಾಹನಗಳ ಸಾಮೂಹಿಕ ಆತ್ಮಹತ್ಯೆ! ಟೋಲ್ ವಿರೋಧಿ ಹೋರಾಟ ಪ್ರದೇಶದಲ್ಲಿ ಗಮನ ಸೆಳೆದ ಅಣಕು ಪ್ರದರ್ಶನ

ಪಡುಬಿದ್ರಿ-ಬೆಳ್ಮಣ್-ಕಾರ್ಕಳ ರಾಜ್ಯ ಹೆದ್ದಾರಿಗೆ ಟೋಲ್‌ಗೇಟ್ ನಿರ್ಮಿಸುವ ಹುನ್ನಾರ ನಡೆಯುತ್ತಿರುವ ಹಿನ್ನಲೆಯಲ್ಲಿ ಕಂಚಿನಡ್ಕದಲ್ಲಿ ಸಾರ್ವಜನಿಕವಾಗಿ ನಡೆಯುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ವಾಹನಗಳು ಮರಕ್ಕೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ಅಣಕು ಪ್ರದರ್ಶನ ಜನರ ಗಮನ ಸೆಳೆಯುತ್ತಿದೆ.

ಈ ವಾಹನಗಳು ಬ್ಯಾಂಕ್ ಸಾಲ ಕಟ್ಟಲಾರದೆ ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಾಗಿ ಟೋಲ್ ಕಟ್ಟಲಾಗದ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಒಂದು ಟಿಪ್ಪರ್ ಕಾರ್ಕಳದಿಂದ ಮಂಗಳೂರಿಗೆ ಹೋಗಬೇಕಾದರೆ ಸರಿ ಸುಮಾರು ಐನೂರು ರೂಪಾಯಿ ಸುಂಕ ನೀಡುವ ಅನಿವಾರ್ಯ ಸ್ಥಿತಿ ಪಡುಬಿದ್ರಿ-ಕಾರ್ಕಳ ರಸ್ತೆಗೆ ಟೋಲ್ ಗೇಟ್ ನಿರ್ಮಾಣವಾದರೆ ಆಗಲಿದೆ. ಇದರ ನೇರ ಹೊರೆ ಗ್ರಾಹಕರಿಗೆ ಬೀಳಲಿದೆ. ಇಂಥಹ ದುಸ್ಥಿತಿ ಬರುವ ಮುನ್ನ ನಾವು ಜಾಗೃತಗೊಂಡು ಟೋಲ್‌ಗೇಟ್ ವಿರುದ್ಧ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಮತ್ತೆ ಪಡುಬಿದ್ರಿ-ಕಾರ್ಕಳ ರಸ್ತೆಯ ಯಾವುದೇ ಭಾಗದಲ್ಲಿ ಈ ಟೋಲ್‌ಗೇಟ್ ಎಂಬ ಭೂತ ತಲೆ ಎತ್ತದಂತೆ ಶಾಶ್ವತವಾಗಿ ಓಡಿಸಲು ನಾವೆಲ್ಲರೂ ಒಂದಾಗೋಣ ಎಂಬುದಾಗಿ ಪ್ರತಿಭಟನಕಾರ ಉದಯಕುಮಾರ್ ಶೆಟ್ಟಿ ಇನ್ನಾ ಹೇಳಿದ್ದಾರೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ