ಮಣಿಪಾಲ ವಿದ್ಯಾರ್ಥಿಗಳ ಹೊಡೆದಾಟ; ಪ್ರಕರಣ ದಾಖಲು, ಪೊಲೀಸರಿಂದ ತನಿಖೆ

ಮಣಿಪಾಲ : ಮಣಿಪಾಲದಲ್ಲಿ ನಡೆದ ವಿದ್ಯಾರ್ಥಿಗಳ ಹೊಡೆದಾಟ, ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲಿಸರಿಂದಲೇ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ರಾತ್ರಿಯ ಬೀಟ್ ಕರ್ತವ್ಯದಲ್ಲಿ ಇದ್ದಾಗ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಗಲಾಟೆ ನಡೆದ ಬಗ್ಗೆ ಮಾಹಿತಿ ಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ 8 ರಿಂದ 10 ಜನ ಸೇರಿದ್ದು ಓರ್ವ ವ್ಯಕ್ತಿಯನ್ನು ಓಡಾಡಿಸಿಕೊಂಡು ಕೈಯಿಂದ ಹಲ್ಲೆ ಮಾಡಿರುವುದು ಗಮನಕ್ಕೆ ಬಂದಿದೆ. ಆತನ ಶರ್ಟನ್ನು ಎಳೆದಾಡುತ್ತಿದ್ದರು, ಹಿಂದಿ ಭಾಷೆಯಲ್ಲಿ ಬೈದಾಡಿಕೊಳ್ಳುತ್ತಿದ್ದರು ಸ್ಥಳಕ್ಕೆ ತೆರಳಿ ಗಲಾಟೆಯನ್ನು ತಪ್ಪಿಸಿ ಗಾಯಾಳುಗೆ ಆಸ್ಪತ್ರೆಗೆ ಹೋಗಲು ಸೂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಗಲಾಟೆಯ ಕಾರಣಕ್ಕೆ ಕಲಂ 189(2 )191) 126 (2 )115 (2) 352ನಂತೆ ಪ್ರಕರಣ ದಾಖಲಿಸಲಾಗಿದೆ. ಪ್ರೇಮಿಗಳ ದಿನದಂದು ರಾತ್ರಿ ರಸ್ತೆಯಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡ ಪ್ರಕರಣ ಸಂಬಂಧ ಇದೀಗ ತನಿಖೆ ಮುಂದುವರೆದಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ