ಮಣಿಪಾಲ ಆರೋಗ್ಯ ಕಾರ್ಡ್ – 2024 ನೋಂದಣಿಗೆ ಚಾಲನೆ; ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ

ಮಣಿಪಾಲ : ಮಣಿಪಾಲ ಸಮೂಹ ಸಂಸ್ಥೆಗಳ ಮಣಿಪಾಲ ಆರೋಗ್ಯ ಕಾರ್ಡ್-2024 ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದು ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್ ಬಲ್ಲಾಳ್ ಹೇಳಿದರು.

ಅವರು ಮಂಗಳವಾರದಂದು ಮಣಿಪಾಲ ಆರೋಗ್ಯ ಕಾರ್ಡ್-2023 ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಸಾಂಕೇತಿಕವಾಗಿ ಅವರು ಕಾರ್ಡ್ ವಿತರಿಸಿದರು.

ಕಾರ್ಡ್‌ಗಳ ದರ ಪಟ್ಟಿ :

1 ವರ್ಷದ ಯೋಜನೆ ಸದಸ್ಯತ್ವ ಪಡೆಯಲು ಒಬ್ಬರು 350 ರೂ. ಪಾವತಿ ಮಾಡಬೇಕು. ಕೌಟುಂಬಿಕ ಕಾರ್ಡ್‌ ಪಡೆದರೆ ಕಾರ್ಡ್‌ ಹೊಂದಿರುವ ವ್ಯಕ್ತಿ, 25 ವರ್ಷದ ಒಳಗಿನ ಮಕ್ಕಳಿಗೆ 700 ರೂ. ಮತ್ತು ಕೌಟುಂಬಿಕ ಪ್ಲಸ್ (ತಂದೆ-ತಾಯಿ-ಅತ್ತೆ-ಮಾವ) ಯೋಜನೆಗೆ 900 ರೂ. ದರವಿದೆ.

2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ 600 ರೂ., ಕುಟುಂಬಕ್ಕೆ 950 ರೂ., ಕೌಟುಂಬಿಕ ಪ್ಲಸ್ ಯೋಜನೆಗೆ 1100 ರೂ. ದರವಿದೆ.

ಕಾರ್ಡ್ ಸೌಲಭ್ಯ :

ತಜ್ಞ ಮತ್ತು ವಿಶೇಷ ವೈದ್ಯರ ಸಮಾಲೋಚನೆ ಶುಲ್ಕದಲ್ಲಿ ಶೇ 50 (ಒಪಿಡಿ ದಿನಗಳಂದು), ಹೊರರೋಗಿ ಲ್ಯಾಬ್‌ ಪರೀಕ್ಷೆಗೆ ಶೇ 25, ಸಿಟಿ/ಎಂಆರ್‌ಐ/ಅಲ್ಟ್ರಾ ಸೌಂಡ್‌ ಪರೀಕ್ಷೆ ಹಾಗೂ ಹೊರರೋಗಿ ಮಧುಮೇಹ ತಪಾಸಣೆಗೆ ಶೇ 20ರಷ್ಟು ರಿಯಾಯಿತಿ ಸಿಗಲಿದೆ. ಹೊರರೋಗಿ ಡಯಾಲಿಸಿಸ್‌ಗೆ 100 ರೂ.ರಿಯಾಯತಿ ಹಾಗೂ ಮೆಡಿಕಲ್ ಶಾಪ್‌ಗಳಲ್ಲಿ ಶೇ 10ರಷ್ಟು ರಿಯಾಯಿತಿ ಸಮಾನ್ಯ ವಾರ್ಡ್ ನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಮತ್ತು ಪ್ಯಾಕೇಜ್ ಗಳನ್ನು ಹೊರತುಪಡಿಸಿ ಶೇ. 25 ರಿಯಾಯತಿ ದೊರೆಯಲಿದೆ.

ರಾಜ್ಯದಾದ್ಯಂತ ಸುಮಾರು 12 ರಿಂದ 15 ಜಿಲ್ಲೆಗಳಲ್ಲಿ ಸೇವೆಯನ್ನು ವಿಸ್ತರಿಸಲಾಗಿದೆ. ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ.ಟಿ.ಎಂ.ಪೈ ಆಸ್ಪತ್ರೆ ಉಡುಪಿ, ಡಾ. ಟಿ.ಎಂ.ಎ ರೋಟರಿ ಆಸ್ಪತ್ರೆ ಕಾರ್ಕಳ, ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಮತ್ತು ಮಂಗಳೂರು, ದುರ್ಗಾ ಸಂಜೀವನಿ ಆಸ್ಪತ್ರೆ ಕಟೀಲು ಮತ್ತು ಮಣಿಪಾಲ್ ಆಸ್ಪತ್ರೆ ಗೋವಾ ಮುಂತಾದೆಡೆ ಪ್ರಯೋಜನ ಪಡೆಯಬಹುದು ಎಂದು ಮಾರುಕಟ್ಟೆ ವಿಭಾಗದ ಮೋಹನ್ ಶೆಟ್ಟಿ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್‌ https://manipalhealthcard.com ಗೆ ಭೇಟಿ ನೀಡಬಹುದು ಅಥವಾ ದೂ.ಸಂಖ್ಯೆ: 9980854700/08202923748 ಸಂಪರ್ಕಿಸಬಹುದು.

Related posts

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar

ಕರವೇ ಕಾಪು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ