2025ರ ಕ್ಯೂಎಸ್ ಸಬ್ಜೆಕ್ಟ್ ಶ್ರೇಯಾಂಕದಲ್ಲಿ ಮಹತ್ವದ ಸಾಧನೆ – ಲೈಫ್ ಸೈನ್ಸಸ್ ಮತ್ತು ಮೆಡಿಸಿನ್ ವಿಭಾಗದಲ್ಲಿ 24 ಸ್ಥಾನಗಳ ಏರಿಕೆ ಕಂಡ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ (ಮಾಹೆ)

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ (ಮಾಹೆ) 2025ನೇ ಸಾಲಿನ ಕ್ವಾಕ್ವರೆಲ್ಲಿ ಸೈಮಂಡ್ಸ್ (ಕ್ಯೂಎಸ್) ವರ್ಲ್ಡ್ ಯುನಿವರ್ಸಿಟಿ ಶ್ರೇಯಾಂಕದಲ್ಲಿ ಉತ್ತಮ ಶ್ರೇಯಾಂಕಗಳನ್ನು ಗಳಿಸಿ ಮಹತ್ತರ ಸಾಧನೆ ಮಾಡಿದೆ. ಮಾಹೆ ಎಂಟು ಸೀಮಿತ ವಿಷಯಗಳಲ್ಲಿ ಮತ್ತು ಒಂದು ವಿಸ್ತಾರ ವಿಷಯದಲ್ಲಿ ಅತ್ಯುತ್ತಮ ಶ್ರೇಯಾಂಕ ಪಡೆದಿದೆ. ಜೀವ ವಿಜ್ಞಾನ ವಿಭಾಗದಲ್ಲಿ ಈ ವರ್ಷ 293ನೇ ಸ್ಥಾನ ಗಳಿಸಿದ್ದು ವಿಶೇಷವಾಗಿದೆ. ಕಳೆದ ವರ್ಷ ಈ ವಿಷಯಕ್ಕೆ 317ನೇ ಸ್ಥಾನ ದೊರಕಿದ್ದು, ಈ ಬಾರಿ 24 ಸ್ಥಾನ ಏರಿಕೆಯಾಗಿದೆ. ಮೆಡಿಸಿನ್ ವಿಭಾಗವು 251-300ನೇ ಸ್ಥಾನದಲ್ಲಿದೆ.

ಹೊಸ ಕ್ಯೂಎಸ್ ಶ್ರೇಯಾಂಕದಲ್ಲಿ ಮಾಹೆ, ಜೈವಿಕ ವಿಜ್ಞಾನ ಮತ್ತು ವೈದ್ಯಶಾಸ್ತ್ರ (ಲೈಫ್ ಸೈನ್ಸಸ್ ಮತ್ತು ಮೆಡಿಸಿನ್), ರಸಾಯನ ಶಾಸ್ತ್ರ (ಕೆಮಿಸ್ಟ್ರಿ), ಜೀವ ಶಾಸ್ತ್ರ (ಬಯಾಲಾಜಿಕಲ್ ಸೈನ್ಸಸ್), ಗಣಕ ವಿಜ್ಞಾನ ಮತ್ತು ಮಾಹಿತಿ ವ್ಯವಸ್ಥೆ (ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫರ್ಮೇಷನ್ ಸಿಸ್ಟಮ್ಸ್), ದಂತ ವೈದ್ಯಕೀಯ, ರಾಸಾಯನಿಕ (ಕೆಮಿಕಲ್) ಎಂಜಿನಿಯರಿಂಗ್, ವೈದ್ಯಕೀಯ (ಮೆಡಿಸಿನ್), ಔಷಧ ಹಾಗೂ ಔಷಧವಿಜ್ಞಾನ (ಫಾರ್ಮಸಿ ಆಂಡ್ ಫಾರ್ಮಕಾಲಜಿ), ಮತ್ತು ಅರ್ಥಶಾಸ್ತ್ರ ಮತ್ತು ಅರ್ಥಮಾಪನಶಾಸ್ತ್ರ (ಎಕಾನಾಮಿಕ್ಸ್ ಆಂಡ್ ಎಕನಾಮೆಟ್ರಿಕ್ಸ್‌) ನಂತಹ ಪ್ರಮುಖ ಸಬ್ಜೆಕ್ಟ್ ಗಳಲ್ಲಿ ಮನ್ನಣೆ ಗಳಿಸಿದೆ.

ಈ ಸಾಧನೆ ಕುರಿತು ಮಾತನಾಡಿರುವ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ನ (ಮಾಹೆ) ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ವಿಎಸ್ಎಂ ಮಾತನಾಡಿ, “ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ (ಮಾಹೆ) 2025ರ ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರಾಂಕಿಂಗ್ ನಲ್ಲಿ ಶ್ರೇಷ್ಠ ಸಾಧನೆ ತೋರಿರುವುದನ್ನು ನಾವು ಗರ್ವದಿಂದ ಸಂಭ್ರಮಿಸುತ್ತಿದ್ದೇವೆ. ಈ ವರ್ಷ ನಮ್ಮ ಸಂಸ್ಥೆಯು ಶೈಕ್ಷಣಿಕ ಮತ್ತು ಸಂಶೋಧನಾ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರಿಸಿದೆ. ಜೀವ ವಿಜ್ಞಾನ ಮತ್ತು ವೈದ್ಯಕೀಯ, ರಸಾಯನಶಾಸ್ತ್ರ, ಜೀವ ವಿಜ್ಞಾನ ಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫರ್ಮೇಷನ್ ಸಿಸ್ಟಮ್ಸ್, ದಂತ ವೈದ್ಯಕೀಯ, ರಾಸಾಯನಿಕ ಎಂಜಿನಿಯರಿಂಗ್, ವೈದ್ಯಕೀಯ ನಂತಹ ವಿಷಯಗಳಲ್ಲಿ ಉತ್ತಮ ಮನ್ನಣೆ ಗಳಿಸಿದೆ. ಈ ಸಾಧನೆ ನಮ್ಮ ನಿರಂತರ ಅಭಿವೃದ್ಧಿಯನ್ನು ತೋರಿಸುತ್ತದೆ. ಜಾಗತಿಕ ಶ್ರೇಯಾಂಕದಲ್ಲಿನ ನಮ್ಮ ಸ್ಥಿರ ಸ್ಥಾನವು ನಮ್ಮ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರ ಬದ್ಧತೆಯನ್ನು ಪ್ರದರ್ಶಿಸುತ್ತದೆ. 2024ರ ಸಾಲಿನಲ್ಲಿ ಮೆಡಿಸಿನ್, ಫಾರ್ಮಸಿ ಆಂಡ್ ಫಾರ್ಮಕಾಲಜಿ, ಅನಾಟಮಿ ಆಂಡ್ ಫಿಸಿಯೋಲಜಿ ಮತ್ತು ದಂತ ವೈದ್ಯಕೀಯ ವಿಭಾಗಗಳಲ್ಲಿ ಮಾಹೆ ಮನ್ನಣೆ ಪಡೆದಿತ್ತು. ಈ ವರ್ಷ ಹೊಸ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿದ್ದು, ನಮ್ಮ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿರುವುದನ್ನು ಈ ಸಾಧನೆಯು ತೋರಿಸಿದೆ. ಉತ್ತಮ ಶೈಕ್ಷಣಿಕ ವಾತಾವರಣ, ಸಂಶೋಧನೆ, ಮತ್ತು ಸಮಾಜ ಪರಿವರ್ತಿಸುವ ಶಿಕ್ಷಣದ ಮೂಲಕ ಕೊಡುಗೆ ನೀಡುವ ನಮ್ಮ ಬದ್ಧತೆಯನ್ನು ಈ ಮನ್ನಣೆಯು ಮತ್ತಷ್ಟು ಬಲಪಡಿಸಲಿದೆ. ಮಾಹೆ ಉನ್ನತ ಶಿಕ್ಷಣದಲ್ಲಿ ಹೊಸ ಮಾನದಂಡಗಳನ್ನು ಹಾಕಿಕೊಡಲು ಬದ್ಧವಾಗಿದೆ” ಎಂದು ಹೇಳಿದರು.

ಕಳೆದ ವರ್ಷದ ಶ್ರೇಯಾಂಕಕ್ಕೆ ಹೋಲಿಸಿದರೆ ಎರಡು ಸೂಕ್ಷ್ಮ ಸಬ್ಜೆಕ್ಟ್ ಗಳು ಈ ವರ್ಷ 400ರ ಒಳಗಿನ ಶ್ರೇಯಾಂಕ ಪಡೆದಿವೆ (ಕೆಮಿಕಲ್ ಎಂಜಿನಿಯರಿಂಗ್ ಮತ್ತು ಎಕಾನಾಮಿಕ್ಸ್ ಆಂಡ್ ಎಕನಾಮೆಟ್ರಿಕ್ಸ್).
ಪ್ರಮುಖ ವಿಶೇಷತೆಗಳು:

  • ವಿಸ್ತಾರ ವಿಷಯ ವಿಭಾಗದಲ್ಲಿನ ಸಾಧನೆ: ಲೈಫ್ ಸೈನ್ಸಸ್ ಆಂಡ್ ಮೆಡಿಸಿನ್ ವಿಭಾಗದಲ್ಲಿ ಮಾಹೆ 293ನೇ ಶ್ರೇಯಾಂಕ ಪಡೆದಿದ್ದು, ಕಳೆದ ವರ್ಷಕ್ಕಿಂತ 24 ಸ್ಥಾನಗಳ ಏರಿಕೆ ಗಳಿಸಿದೆ.
  • ಸೀಮಿತ ವಿಷಯಗಳಲ್ಲಿ ಸಾಧನೆ:
  • ಕೆಮಿಕಲ್ ಎಂಜಿನಿಯರಿಂಗ್: 401–450 ಶ್ರೇಯಾಂಕ
  • ಎಕಾನಾಮಿಕ್ಸ್ ಆಂಡ್ ಎಕನಾಮೆಟ್ರಿಕ್ಸ್: 551–700 ಶ್ರೇಯಾಂಕ
    ಗಮನಾರ್ಹ ಸುಧಾರಣೆಗಳು:
  • ಫಾರ್ಮಸಿ ಆಂಡ್ ಫಾರ್ಮಕಾಲಜಿ: 101–150 ಶ್ರೇಯಾಂಕ, 50 ಸ್ಥಾನಗಳ ಏರಿಕೆ
  • ರಸಾಯನಶಾಸ್ತ್ರ: 501–550 ಶ್ರೇಯಾಂಕ, 100 ಸ್ಥಾನಗಳ ಏರಿಕೆ
  • ದಂತ ವೈದ್ಯಕೀಯ: 51–120 ಶ್ರೇಯಾಂಕದ ಉತ್ತಮ ಬ್ಯಾಂಡ್‌ನಲ್ಲಿ
  • ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫರ್ಮೇಷನ್ ಸಿಸ್ಟಮ್ಸ್: 601–650 ಶ್ರೇಯಾಂಕ
  • ಮೆಡಿಸಿನ್: 251–300 ಶ್ರೇಯಾಂಕ
  • ಬಯಾಲಾಜಿಕಲ್ ಸೈನ್ಸಸ್: 501–550 ಶ್ರೇಯಾಂಕ

ಶೈಕ್ಷಣಿಕ ಶ್ರೇಷ್ಠತೆ ಮತ್ತು ಹೊಸತನದ ಗಟ್ಟಿ ಅಡಿಪಾಯ ಹೊಂದಿರುವ ಮಾಹೆ ಶಿಕ್ಷಣದ ಭವಿಷ್ಯದ ಹಾದಿಯನ್ನು ರೂಪಿಸುತ್ತಿದೆ. 2025ರ ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ಸಬ್ಜೆಕ್ಟ್ ರಾಂಕಿಂಗ್ ನಲ್ಲಿನ ಈ ಹೊಸ ಸಾಧನೆಯು, ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ ಶ್ರೇಷ್ಠತಾ ಕೇಂದ್ರವಾಗುವ ಮಾಹೆಯ ಗುರಿಸಾಧನೆಗೆ ಒಂದು ಪ್ರಮುಖ ಹೆಜ್ಜೆಯಾಗಿದೆ.

Related posts

ಕನಿಷ್ಟ ಕೂಲಿ, ತುಟ್ಟಿಭತ್ಯೆ ಕಡಿತಗೊಳಿಸಿದ ರಾಜ್ಯ ಸರಕಾರದ ಆದೇಶ ವಾಪಸಾತಿಗೆ ಒತ್ತಾಯಿಸಿ ಪ್ರತಿಭಟನೆ

ಕೋಟದಲ್ಲಿ ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಮೃತ್ಯು

ಮತ್ಸ್ಯಗಂಧ ರೈಲಿನಲ್ಲಿ ಲಕ್ಷಾಂತರ ಮೌಲ್ಯದ ವಜ್ರಾಭರಣ ಕಳವು – ದೂರು ದಾಖಲು