ಥಾಯ್ಲೆಂಡ್‌ನಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಟೀನ್ ಸೂಪರ್ ಗ್ಲೋಬ್‌ ಸ್ಪರ್ಧೆ – ಕಪ್ ಗೆದ್ದ ಮಂಗಳೂರು ಹುಡುಗ ವರುಣ್ ಶೆಲ್ಡನ್ ಡಿ’ಕೋಸ್ಟಾ

ಮಂಗಳೂರು : ಥಾಯ್ಲೆಂಡ್‌ನಲ್ಲಿ ನಡೆದ ಮಿಸ್ಟರ್ ಆ್ಯಂಡ್ ಮಿಸ್ ಟೀನ್ ಸೂಪರ್ ಗ್ಲೋಬ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರು ಹುಡುಗ ವರುಣ್ ಶೆಲ್ಡನ್ ಡಿ’ಕೋಸ್ಟಾ ಕಪ್ ಗೆದ್ದಿದ್ದಾರೆ. ಶನಿವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಕಪ್ ಗೆದ್ದ ಇವರು ಮಂಗಳವಾರ ತಾಯ್ನಾಡಿಗೆ ಮರಳಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ದೂರಿ ಸ್ವಾಗತ ದೊರಕಿತು.

ವರುಣ್ ಶೆಲ್ಡನ್ ಡಿ’ಕೋಸ್ಟಾ ಬಜ್ಪೆ ನಿವಾಸಿಗಳಾದ ವಿನ್ಸೆಂಟ್ ಡಿ’ಕೋಸ್ಟಾ ಮತ್ತು ಲಿಡ್ವಿನ್ ಡಿ’ಕೋಸ್ಟಾ ಪುತ್ರ. ಬಜ್ಪೆಯ ಸೈಂಟ್ ಜೋಸೆಫ್ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ. ಈ ವರ್ಷದ ಮೇ ತಿಂಗಳಲ್ಲಿ ಕಲ್ಕತ್ತಾದಲ್ಲಿ ನಡೆದ ನ್ಯಾಷನಲ್ ರೌಂಡ್‌ನಲ್ಲಿ ಆಯ್ಕೆಯಾಗಿ ಥಾಯ್‌ಲ್ಯಾಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ವರುಣ್. ಇವರಿಗೆ ವಿಜೆ ಡಿಕ್ಸನ್ ತರಬೇತಿ ನೀಡಿದ್ದರು. ಥಾಯ್ಲಾಂಡ್‌ನಲ್ಲಿ ಮೂರು ದಿನಗಳ ಕಾಲ ಸ್ಪರ್ಧೆ ನಡೆದು ಶನಿವಾರ ಫೈನಲ್ ರೌಂಡ್‌ ಸ್ಪರ್ಧೆ ನಡೆದಿತ್ತು.

ಫಿಲಿಫೈನ್ಸ್, ಇಂಡೋನೇಷ್ಯಾ, ಕಜಕಿಸ್ತಾನ್, ಯುಎಇ, ಒಮಾನ್, ಅರ್ಮೇನಿಯಾ, ಸೌತ್ ಆಫ್ರಿಕಾ ಸೇರಿದಂತೆ 21 ದೇಶಗಳಿಂದ ಬಂದ ಸ್ಪರ್ಧಾಳುಗಳು ಕಣದಲ್ಲಿದ್ದರು. ವಿಭಿನ್ನ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ವರುಣ್ ಶೆಲ್ಡನ್ ಡಿ’ಕೋಸ್ಟಾ 13-15ರ ಕೆಟಗರಿಯಲ್ಲಿ ಭಾಗವಹಿಸಿದ್ದಾರೆ. ಸ್ಪರ್ಧಾಳುಗಳ ಟ್ಯಾಲೆಂಟ್‌ ಹಾಗೂ ಫ್ಯಾಷನ್ ಜೊತೆಗೆ ಇತರ ಸ್ಪರ್ಧಿಗಳೊಂದಿಗೆ ಬೆರೆಯುವುದನ್ನು ಗಮನಿಸಿ ಮಿಸ್ಟರ್ ಆ್ಯಂಡ್ ಮಿಸ್ ಟೀನ್‌ಗಳನ್ನು ಆಯ್ಕೆ ಮಾಡಲಾಗುತ್ತದೆ. ನೃತ್ಯವನ್ನು ಕಲಿಯುತ್ತಿರುವ ವರುಣ್ ಶೆಲ್ಡನ್ ಡಿ’ಕೋಸ್ಟಾ ಶೀಘ್ರದಲ್ಲೇ ಖಾಸಗಿ ವಾಹಿನಿಯೊಂದರಲ್ಲಿ ನಡೆಯುವ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ

ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ