ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಕುಂದಾಪುರ : ವ್ಯಕ್ತಿಯೊಬ್ಬರು ರೈಲು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಹಟ್ಟಿಯಂಗಡಿ ರೈಲ್ವೇ ಸೇತುವೆ ಬಳಿ ಸಂಭವಿಸಿದೆ.

ವೋಕಾ-ಎರ್ನಾಕುಲಂ ರೈಲಿನ ಲೋಕೋ ಪೈಲಟ್‌ ಅಂಕುಲ್‌ ಎಮ್‌. ಮೂಡ್ಲಕಟ್ಟೆ ರೈಲ್ವೇ ಸ್ಟೇಷನ್‌ನಲ್ಲಿ ಮಾಹಿತಿ ನೀಡಿದ ಮೇರೆಗೆ ಪರಿಶೀಲಿಸಿದಾಗ ಅಬ್ಬಿಗುಡ್ಡಿಯ ನಾಗೇಶ್‌ ಅವರ ಮುಖಕ್ಕೆ ರೈಲು ಡಿಕ್ಕಿಯಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ