ಮಣಿಪಾಲ : ಉಡುಪಿಯ ಮಣಿಪಾಲದಲ್ಲಿ ವ್ಯಕ್ತಿಯೊಬ್ಬನನ್ನು ಬಿಯರ್ ಬಾಟಲಿಯಿಂದ ಚುಚ್ಚಿ ಕೊಲೆಗೈದ ಘಟನೆ ಸಂಭವಿಸಿದೆ.
ಮಣಿಪಾಲದ ಅನಂತ ಕಲ್ಯಾಣ ನಗರದಲ್ಲಿ ಘಟನೆ ನಡೆದಿದ್ದು ಎಸ್ಪಿ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡು ನಿವಾಸಿ, ಹೋಟೆಲ್ ಕಾರ್ಮಿಕ ಶ್ರೀಧರ ಕೊಲೆಯಾದ ವ್ಯಕ್ತಿ.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಡಾಗ್ ಸ್ಕ್ವಾಡ್, ಎಫ್‌ಎಸ್‌ಎಲ್ ತಂಡ ಆಗಮಿಸುತ್ತಿದೆ.
ತಡರಾತ್ರಿ ಅಥವಾ ಮುಂಜಾನೆ ಘಟನೆ ನಡೆದಿರುವ ಶಂಕೆ ಇದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.