ಮೂಡುಬಿದಿರೆ : ಮೂಡುಬಿದಿರೆ ಸಮೀಪ ಪಡುಮಾರ್ನಾಡು ಗ್ರಾಮದ ಬನ್ನಡ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬರು ಸಂಜೆ ಬೈಕ್‌ನಿಂದ ಬಿದ್ದು ಮೃತಪಟ್ಟಿದ್ದಾರೆ
ತೋಡಾರು ಗ್ರಾಮದ ಸೀತಾರಾಮ ಆಚಾರ್ಯ (49) ಅವರು ಮೃತಪಟ್ಟಿದ್ದು, ಪೋಲಿಸರು ಸಂಶಯಾಸ್ಪದ ಸಾವೆಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಮೂಡುಬಿದಿರೆಯ ಜ್ಯೋತಿನಗರದಲ್ಲಿ ಚಿನ್ನಾಭರಣ ತಯಾರಿಗೆ ಸಂಬಂಧಿಸಿದ ವಿಘ್ನೇಶ್ ಮೆಷಿನ್ ಕಟ್ಟಿಂಗ್ ಎಂಬ ಉದ್ಯಮವನ್ನು ಅವರು ನಡೆಸುತ್ತಿದ್ದರು.
ಜ. 3ರಂದು ನಡೆಯಲಿದ್ದ ಅವರ ಪುತ್ರನ ಉಪನಯನದ ಕಾಗದವನ್ನು ವಿತರಿಸಿ ವಾಪಸು ಬರುತ್ತಿದ್ದ ವೇಳೆ ಬನ್ನಡ್ಕದ ಬಳಿ ಬೈಕ್‌ನಿಂದ ಬಿದ್ದಿದ್ದರು. ಪೋಲಿಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.