ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಮಣಿಪಾಲ : ಮನೆಯ ಬಾವಿಯ ರಾಟೆ ಅಳವಡಿಸುವ ಅಡ್ಡಪಟ್ಟಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಮನೆ ಯಜಮಾನ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೆರಂಪಳ್ಳಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ‌ ಸ್ವಷ್ಟ ಕಾರಣ ತಿಳಿದುಬಂದಿಲ್ಲ. ಮೃತ ವ್ಯಕ್ತಿ ದೇವೇಂದ್ರ ನಾಯ್ಕ್ (65 ವ) ಎಂದು ಗುರುತಿಸಲಾಗಿದೆ.

ಮಣಿಪಾಲ ಪೋಲಿಸ್ ಠಾಣೆಯ ಎ‌ಎಸ್‌ಐ ಮನೋಹರ್, ಹೆಡ್ ಕಾನ್ಸಟೇಬಲ್ ಜ್ಯೋತಿ ನಾಯ್ಕ್, ಅರುಣಾ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಮರಣೋತ್ತರ‌ ಪರೀಕ್ಷೆ ನಡೆಸಲು, ಶವವನ್ನು ಮಣಿಪಾಲದ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಠಾಣೆಗೆ ನೆರವಾದರು.

Related posts

ಸಿಪಿಎಂ ಕಾರ್ಯದರ್ಶಿ ಮೇಲೆ ದುರುದ್ದೇಶಪೂರಿತ ಎಫ್ಐಆರ್ – ಖಂಡನೆ

ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ, ಸಿಬಂದಿ ಕನ್ನಡದಲ್ಲೇ ವ್ಯವಹರಿಸುವ ಕಾನೂನು ಅಗತ್ಯ – ಸಚಿವರಿಗೆ ಸಂಸದ ಕೋಟ ಪತ್ರ