ಎ.2ರಿಂದ ಉಡುಪಿಯಲ್ಲಿ ದುಬೈ ಮೂಲದ “ಮೊಲ್ಟೊ ಕೇರ್” ಪ್ರೊಪರ್ಟಿ ಸರ್ವೀಸ್ ಕಂಪೆನಿ ಕಾರ್ಯಾರಂಭ

ಉಡುಪಿ : ದುಬೈ ಮೂಲದ ಪ್ರೊಪರ್ಟಿ ಸರ್ವೀಸ್ ಕಂಪೆನಿಯಾದ “ಮೊಲ್ಟೊ ಕೇರ್” ಉಡುಪಿಗೆ ಕಾಲಿಟ್ಟಿದೆ. ಭಾರತದಲ್ಲೇ ಪ್ರಥಮವಾಗಿ ಉಡುಪಿಯಲ್ಲಿ ಎ.2ರಂದು ಕುಂಜಿಬೆಟ್ಟುವಿನಲ್ಲಿ ಕಾರ್ಯಾರಂಭಿಸಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಕೃಷ್ಣರಾಜ್ ತಂತ್ರಿ ಅವರು, ಈ ಸಂಸ್ಥೆಯು ಆಸ್ತಿ ಮತ್ತು ಮನೆ, ಕಚೇರಿಯ ಎಲೆಕ್ಟ್ರಾನಿಕ್ಸ್ ವಸ್ತುಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಏರ್-ಕಂಡೀಷನಿಂಗ್, ಇಲೆಕ್ಟ್ರಿಕಲ್, ಪ್ಲಂಬಿಂಗ್, ಮರಕೆಲಸ, ಗಾರೆ ಕೆಲಸ ಇತ್ಯಾದಿ ಮನೆಯೊಳಗಿನ ಸೇವೆಗಳನ್ನು ಜನರಿಗೆ ನೀಡುತ್ತದೆ. ಅಲ್ಲದೇ ಮನೆಯ ಸ್ವಚ್ಚತೆ ಇತ್ಯಾದಿಗಳನ್ನು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ನಿಗದಿತ ದರಕ್ಕೆ ನೋಡಿಕೊಳ್ಳುತ್ತದೆ ಎಂದರು‌.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಟೆಕ್ ಸಪೋರ್ಟ್ ವಿಜೇತಾ ತಂತ್ರಿ, ನಿರ್ವಹಣೆ ಇಂಜಿನಿಯರ್ ಮುರುಗನ್, ಎಸಿ ಟೆಕ್ನಿಶೀಯನ್ ರಂಜಿತ್ ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ