ರೋಟರಿ ಕ್ಲಬ್ ಶಂಕರಪುರ ಇದರ ನೂತನ ಅಧ್ಯಕ್ಷೆಯಾಗಿ ಮಾಲಿನಿ ಶೆಟ್ಟಿ ಇನ್ನಂಜೆ ಆಯ್ಕೆ

ಕಾಪು : ಶಂಕರಪುರ ರೋಟರಿ ಕ್ಲಬ್ ಇದರ ನೂತನ ಅಧ್ಯಕ್ಷೆಯಾಗಿ ಮಾಲಿನಿ ಶೆಟ್ಟಿ ಇನ್ನಂಜೆ ಅವರು ಆಯ್ಕೆಗೊಂಡಿದ್ದಾರೆ. ಕಾಪು ಪರಿಸರದಲ್ಲಿ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರುವ ಮಾಲಿನಿ ಶೆಟ್ಟಿಯವರು ಇನ್ನಂಜೆ ಯುವತಿ ಮಂಡಲ ಇದರ ಪೂರ್ವ ಅಧ್ಯಕ್ಷೆಯಾಗಿ, ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಇನ್ನಂಜೆ ಒಕ್ಕೂಟದ ಮಾಜಿ ಅಧ್ಯಕ್ಷೆಯಾಗಿ, ಕಾಪು ಬಂಟರ ಸಂಘ ಇದರ ಸದಸ್ಯರಾಗಿ, ರೋಟರಾಕ್ಟ್ ಸಮ್ಮೇಳನದಲ್ಲಿ ರೋಟರ್‍ಯಾಕ್ಟ್ ಕ್ವೀನ್ ಆಗಿ ಮೂಡಿ ಬಂದ ಇವರು 2018-19‌ರಲ್ಲಿ ರೋಟರ್‍ಯಾಕ್ಟ್ ಡಿಸ್ಟ್ರಿಕ್ಟ್-3182ರ ಮೊದಲ ಮಹಿಳಾ ಜಿಲ್ಲಾ ಪ್ರತಿನಿಧಿಯಾಗಿ (ಡಿಆರ್‌ಆರ್) ಸುಮಾರು 42 ಕ್ಲಬ್‌ಗಳನ್ನು ಮಾಡಿ ಯಶಸ್ವಿ ಪರಿಚಯ ಕಾನ್ಸರೆನ್ಸ್ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ.

2015ರಲ್ಲಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಇವರು ಇನ್ನಂಜೆ ಗ್ರಾಮ ಪಂಚಾಯತ್ ಸದಸ್ಯರಾಗಿ, 5 ವರ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಇನ್ನಂಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 2023ರಲ್ಲಿ ಜೆಸಿಐ ಶಂಕರಪುರ ಜಾಸ್ಮಿನ್‌ನ ಬೆಳ್ಳಿ ಹಬ್ಬದ ಅಧ್ಯಕ್ಷ ಚುಕ್ಕಾಣಿಯನ್ನು ಹಿಡಿದ ಇವರು ಜೆಸಿ ಸದಸ್ಯರ ಮತ್ತು ದಾನಿಗಳ ಸಹಕಾರದಿಂದ ಸುಮಾರು 7 ಲಕ್ಷ ರೂಪಾಯಿಯ ಶಾಶ್ವತ ಕೊಡುಗೆ ಬಸ್ಸು ತಂಗುದಾಣ, 4 ಕಡೆ ಹೈ ಮಾಸ್ಟ್ ಲೈಟ್, ಮಂಗಳೂರು ವಿಶೇಷ ಮಕ್ಕಳ ಶಾಲೆಗೆ ಕ್ಲಾಸ್ ರೂಮ್‌ಗಳ ಕೊಡುಗೆ ನೀಡಿದ್ದು ಮಾತ್ರವಲ್ಲದೆ ಜೆಸಿಐ ಭಾರತದ ಅತೀ ದೊಡ್ಡ ಪ್ರಾಜೆಕ್ಟ್ ಆದ ಜೆಸಿಐ ಕ್ಲಾಕ್ ಟವ‌ರನ್ನು ನಿರ್ಮಿಸಿ ವಲಯದಲ್ಲಿ ಯಾರು ಮಾಡದ ಸಾಧನೆಗಾಗಿ 2023 ರಲ್ಲಿ ಬೆಂಗಳೂರುನಲ್ಲಿ ನಡೆದ ಜೆಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಜೆಸಿಐ ಶಂಕರಪುರಕ್ಕೆ ಮೊತ್ತ ಮೊದಲ ಬಾರಿಗೆ 2 ನ್ಯಾಷನಲ್ ಅವಾರ್ಡ್‌ನೊಂದಿಗೆ, ‘ರಾಷ್ಟ್ರೀಯ ಅಧ್ಯಕ್ಷರ ವಿಶೇಷ ಮನ್ನಣೆಗೆ ಪಾತ್ರರಾದವರಾಗಿದ್ದಾರೆ.

ಬಿಜೆಪಿ ಕಾಪು ಕ್ಷೇತ್ರ ಕೋಶಾಧಿಕಾರಿಯಾಗಿ, ಇನ್ನಂಜೆ ಆಂಗ್ಲ ಮಾಧ್ಯಮದ ಪಿಟಿಎ ಪ್ರೆಸಿಡೆಂಟಾಗಿ, ಜೆಸಿ ವಲಯ 15ರ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್‌ಕೋ ಆರ್ಡಿನೆಟರ್ ಕಾರ್ಯ ನಿರ್ವಹಿಸುತ್ತಿರುವ ಇವರು ರೋಟರಿ ಕ್ಲಬ್ ಶಂಕರಪುರ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದಾರೆ. ಇವರನ್ನು, ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ, ಮುಂಬೈ ಬಂಟರ ಸಂಘದ ಜೊತೆ ಕೋಶಾಧಿಕಾರಿ ಶಶಿಧ‌ರ್ ಶೆಟ್ಟಿ ಇನ್ನಂಜೆ ಅಭಿನಂದಿಸಿದ್ದಾರೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ