ಮಲಬಾರ್ ವಿಶ್ವ ವೈದ್ಯ ಪುರಸ್ಕಾರ

ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಉಡುಪಿ ಶಾಖೆ ಇವರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ಉಡುಪಿ ಜಿಲ್ಲೆಯ ಹಿರಿಯ ವೈದ್ಯರಿಗೆ ಜುಲೈ 24 ಬುಧವಾರದಂದು ಮಲಬಾರ್ ವಿಶ್ವ ವೈದ್ಯ ಪುರಸ್ಕಾರ 2024 ನೀಡಿ ಗೌರವಿಸಲಾಯಿತು.

ಹಿರಿಯ ದಂತ ವೈದ್ಯ ಡಾ। ರಮಾನಂದ ಸೂಡ, ಚರ್ಮರೋಗ ತಜ್ಞ ಡಾ। ವಾದಿರಾಜ್ ಕೋಟ, ಡಾ। ಶ್ರೀಪತಿ ಆರ್ ಹಾಗು ಡಾ। ಚಂದ್ರಶೇಖರ ಅಡಿಗ ಇವರನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ ಶೆಣೈ ಅವರು ಪ್ರಶಸ್ತಿ ಪತ್ರ, ಸ್ಮರಣಿಕೆ, ಫಲಕ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್ ಪಿ., ಮಲಬಾರ್ ಗೋಲ್ಡ್ ಅಂಡ್ ಡೈಮಂಡ್‌ನ ಉಡುಪಿ ಶಾಖೆಯ ವ್ಯವಸ್ಥಾಪಕ ಹಫೀಜ್ ರೆಹಮಾನ್, ಸಂಚಾಲಕ ವಿಘ್ನೇಶ್ವರ ಅಡಿಗ, ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜಿನಿ ವಸಂತ್, ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಸಹ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ, ತಾಲೂಕು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಜಿಲ್ಲಾ ಸಮಿತಿಯ ನಾರಾಯಣ ಮಡಿ, ಡಾ। ದೀಪಾ ಪಂಡಿತ್, ಡಾ| ಮನೋಹರ್ ಬೋಳೂರು, ಡಾ| ಗಣೇಶ್ ಕಾಮತ್, ಡಾ। ಹರೀಶ್ಚಂದ್ರ, ಡಾ। ವ್ಯಾಸರಾಜ ತಂತ್ರಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಧ್ಯಾ ಶೆಣೈ, ಮಧುಸೂದನ ಹೇರೂರು, ಸುಮಿತ್ರ ಕೆರೆಮಠ, ಪುರಂದರ ತಿಂಗಳಾಯ, ರಾಘವೇಂದ್ರ ಅಜೆಕಾರ್, ಲೋಮ್ಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಆಡಳಿತ ಅಧಿಕಾರಿ ಸಿಸ್ಟರ್ ದೀನ ಪ್ರಭಾವತಿ, ಸಮಾಜ ಸೇವಕ ರೋಹಿ ರತ್ನಾಕರ್, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸವಯ್ಯ ಸ್ವಾಮಿ ಚಿಕ್ಕಮಠ, ಆರ್. ವಸಂತ್, ರೊ। ಬಾಲಕೃಷ್ಣ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ