ಮಕ್ಕಳಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡಿಸುವುದರಿಂದ ರಂಗ ಸಾಕ್ಷಾತ್ಕಾರವಾಗುತ್ತದೆ – ಜ್ಯೋತಿ ಸಂತೋಷ್

ಮಣಿಪಾಲ : ಮಕ್ಕಳಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡಿಸುವುದರಿಂದ ರಂಗ ಸಾಕ್ಷಾತ್ಕಾರವಾಗುತ್ತದೆ ಮಾತ್ರವಲ್ಲ, ಬದುಕಿನಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಎದೆಗಾರಿಕೆಯೂ ಬರುತ್ತದೆ. ರಂಗ ನಿರ್ದೇಶಕರಾದ ಕಾಸರಗೋಡು ಚಿನ್ನ ಅವರು ರಂಗ ಸಂಸ್ಕೃತಿ ಮುಖಾಂತರ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದ್ದಾರೆ. ರಂಗ ಸಂಸ್ಕೃತಿಯಂತಹ ಶಿಬಿರಗಳು ಜಿಲ್ಲೆಯಾದ್ಯಂತ ಏರ್ಪಡಿಸಬೇಕು ಎಂದು ಮಾಧವ ಕೃಪಾ ಸ್ಕೂಲ್‌ನ ಉಪ ಪ್ರಾಂಶುಪಾಲರಾದ ಜ್ಯೋತಿ ಸಂತೋಷ್ ಹೇಳಿದರು.

ಅವರು ಮಣಿಪಾಲದ ಸರಳೇಬೆಟ್ಟುವಿನ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್‌ರವರ ನೇತೃತ್ವದಲ್ಲಿ ನಡೆದ ರಂಗ ಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಏರ್ಪಡಿಸಲಾದ ಕಾಸರಗೋಡು ಚಿನ್ನ ನಿರ್ದೇಶನದಲ್ಲಿ ರಂಗಸಂಸ್ಕೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರತ್ನ ಸಂಜೀವ ಕಲಾಮಂಡಲದಲ್ಲಿ ಜರಗಿದ ರಂಗಸಂಸ್ಕೃತಿ ಶಿಬಿರದ ನಿರ್ದೇಶಕರಾದ ಕಾಸರಗೋಡು ಚಿನ್ನ ಅವರು ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ನಾಲ್ಕು ಸಾವಿರ ಮಕ್ಕಳಿಗೆ ರಂಗಸಂಸ್ಕೃತಿ ಶಿಬಿರವನ್ನು ಏರ್ಪಡಿಸಿ ರಂಗಭೂಮಿಯ ಬಗ್ಗೆ ಒಲವನ್ನು ಮೂಡಿಸುವ ಕೆಲಸವನ್ನು ಮಾಡಿದ್ದೇವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಿವಪ್ರೇರಣಾ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್‌ರವರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ತಬಲ, ಹಾರ್ಮೋನಿಯಂ, ಶಾಸ್ತ್ರೀಯ ಸಂಗೀತ, ಡ್ರಾಯಿಂಗ್, ತರಗತಿಗಳನ್ನು ಸುಮಾರು ಎರಡು ವರ್ಷಗಳಿಂದ ಉಚಿತವಾಗಿ ಏರ್ಪಡಿಸಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುವ ಉಳಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇದೀಗ ಈ ಸಾಲಿಗೆ ರಂಗಸಂಸ್ಕೃತಿ ಕೂಡ ಸೇರಿಸಿದ್ದೇವೆ. ಮುಂದಿನ ದಿನಗಳಲ್ಲಿ ಉಡುಪಿ ಪರಿಸರದ ಶಾಲಾ ಕಾಲೇಜುಗಳಲ್ಲಿ ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಈ ಕಾರ್ಯ ಮಾಡಲಿದೆ ಎಂದು ಹೇಳಿದರು.

ರಂಗಸಂಸ್ಕೃತಿ ಕಾರ್ಯಾಗಾರದಲ್ಲಿ ಮೂಕಾಭಿನಯ, ಧ್ವನಿ, ಆಶುರಚನೆ, ನಡೆ, ಪ್ರಸಾದನ ಇತ್ಯಾದಿ ಕಲೆಗಳ ಅಭ್ಯಾಸವನ್ನು ನಡೆಸಿಕೊಡಲಾಯಿತು.

ಪರ್ಕಳ ಪ್ರೌಢಶಾಲೆಯ ಸಂಚಾಲಕರಾದ ದಿನೇಶ್ ಹೆಗ್ಡೆ, ಸ್ಥಳೀಯರಾದ‌ ಶಿಲ್ಪಾ ಸಾಮಂತ್, ಟ್ರಸ್ಟ್‌ನ ಟ್ರಸ್ಟಿ ರಮಾನಂದ್ ಸಾಮಂತ್, ಕಾರ್ಯದರ್ಶಿ ಅಶ್ವಿನಿ ಮಹೇಶ್ ಠಾಕೂರ್‌, ಉದಯವಾಣಿ ದಿನ ಪತ್ರಿಕೆಯ ಮಾಜಿ ಸಂಪಾದಕರಾದ ನಿತ್ಯಾನಂದ ಪಡ್ರೆ, ರಂಗಭೂಮಿ ಕಾರ್ಯಕರ್ತ ಶಶಿ ಭೂಶಂಕಿನಿ ಹಾಗೂ ಇತರರು ಉಪಸ್ಥಿತರಿದ್ದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು