ಮಣಿಪಾಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಮಹೇಶ್ ಪ್ರಸಾದ್

ಮಣಿಪಾಲ : ಪೊಲೀಸ್ ಇಲಾಖೆಯಲ್ಲಿನ ದಕ್ಷ ಅಧಿಕಾರಿ ಎಂಬ ಬಿರುದಿಗೆ ಪಾತ್ರರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಕಾರಣಕ್ಕೆ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿರುವ ಸುರತ್ಕಲ್ ಪೊಲೀಸ್ ಠಾಣೆಯ ಇನ್ಸ್‌ಪೆ‌ಕ್ಟರ್ ಮಹೇಶ್ ಪ್ರಸಾದ್ ಅವರು ಮಣಿಪಾಲ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇವರು ಪುತ್ತೂರು ಮೂಲದವರಾಗಿದ್ದು ಬಂಟ್ವಾಳ, ಹಿರಿಯಡ್ಕ, ಕೋಟ, ಶೃಂಗೇರಿ ಮತ್ತು ಬೆಂಗಳೂರಿನಲ್ಲಿ ಸಬ್‌ಇನ್ಸ್‌ಪೆ‌ಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಿಸಿಬಿ ವಿಭಾಗದಲ್ಲೂ ಕರ್ತವ್ಯ ನಿರ್ವಹಿಸಿ ಅನುಭವ ಹೊಂದಿರುವ ಇವರು ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವವರನ್ನು ಮಟ್ಟ ಹಾಕಿ ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇತ್ತೀಚೆಗೆ ಮಂಗಳೂರಿನ ಕೋಟೆಕಾರ್‌ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ ಅಮೋಘ ಸಾಧನೆಗಾಗಿ ಪ್ರಶಸ್ತಿಗೆ ಕೂಡಾ ಆಯ್ಕೆಯಾಗಿದ್ದರು.

Related posts

ಕುಡಿಯುವ ನೀರಿನ ತುರ್ತು ನಿರ್ವಹಣೆಗೆ ಅನುದಾನ ನೀಡಿ : ಸರ್ಕಾರಕ್ಕೆ ಗಂಟಿಹೊಳೆ ಮನವಿ

ಚಲಿಸುತ್ತಿದ್ದ ಕಾರಿನ ಮೇಲೆ ಮುರಿದು ಬಿದ್ದ ಮರ

ರಾ.ಹೆ.66ರಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸಲು ವಾರದೊಳಗೆ ಡಿಪಿಆರ್‌ : ವಿ.ಪಿ.ಬ್ರಹ್ಮಣಕರ್‌