SII 2025 ಗ್ರೀನ್ ಶ್ರೇಯಾಂಕಗಳ ಪ್ಲಾಟಿನಂ+ ಬ್ಯಾಂಡ್‌ನಲ್ಲಿ ಮಾಹೆಗೆ ಅಗ್ರ ಸ್ಥಾನ

ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಭಾರತದ ಸುಸ್ಥಿರ ಸಂಸ್ಥೆಗಳ ಪ್ಲಾಟಿನಂ+ ಬ್ಯಾಂಡ್‌ನಲ್ಲಿ (ದಿ ಗ್ರೀನ್ ರ್ಯಾಂಕಿಂಗ್ಸ್ 2025) ನಂ. 1 ಸ್ಥಾನ ಪಡೆದಿದೆ ಎಂದು ಘೋಷಿಸಲು ಹೆಮ್ಮೆಪಡುತ್ತದೆ. ಆರ್‌ ವರ್ಲ್ಡ್ ಇನ್‌ಸ್ಟಿಟ್ಯೂಷನಲ್ ರ್‍ಯಾಂಕಿಂಗ್ 2025 ಈ ಶ್ರೇಯಾಂಕವನ್ನು ನೀಡುತ್ತದೆ. ಈ ಗುರುತಿಸುವಿಕೆಯು ಪರಿಸರ ಸಮರ್ಥನೀಯತೆ, ಪರಿಸರ ಸ್ನೇಹಿ ಉಪಕ್ರಮಗಳು ಮತ್ತು ಹಸಿರು ಕ್ಯಾಂಪಸ್ ಗೆ ಮಾಹೆಯ ದೃಢ ಬದ್ಧತೆಯನ್ನು ಪುನರುಚ್ಚರಿಸಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹಸಿರು ಶ್ರೇಯಾಂಕ – SII ನೀಡಿಕೆಯನ್ನು ಸುಸ್ಥಿರತೆಯ ನಿಯತಾಂಕಗಳಾದ ಇಂಧನ ದಕ್ಷತೆ, ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ನವೀನ ಸಮರ್ಥನೀಯ ಯೋಜನೆಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಪ್ಲಾಟಿನಮ್+ ಬ್ಯಾಂಡ್‌ನಲ್ಲಿ ಮಾಹೆಯ ಉನ್ನತ ಸ್ಥಾನವು ಅದರ ಕ್ಯಾಂಪಸ್‌ಗಳಲ್ಲಿ ಸಮಗ್ರ ಸುಸ್ಥಿರ ಅಭ್ಯಾಸಗಳು ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಸಾಕ್ಷಿಯಾಗಿದೆ.

“ಈ ಸಾಧನೆ ಇಡೀ ಮಾಹೆ ಸಮುದಾಯದ ಸಮರ್ಪಣೆ ಮತ್ತು ಸಾಮೂಹಿಕ ಪ್ರಯತ್ನಗಳ ಪ್ರತಿಬಿಂಬಿವಾಗಿದೆ” ಎಂದು ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) M. D. ವೆಂಕಟೇಶ್, VSM, (ನಿವೃತ್ತ) ಹೇಳಿದ್ದಾರೆ. “ನಾವು ಪರಿಸರ ಜವಾಬ್ದಾರಿಯ ಸಂಸ್ಕೃತಿಯನ್ನು ಬೆಳೆಸಲು ಮತ್ತು ಜಾಗತಿಕವಾದ ಉತ್ತಮ ಅಭ್ಯಾಸಗಳೊಂದಿಗೆ ಹೊಂದಿಕೊಳ್ಳುವ ಸುಸ್ಥಿರ ಮಾದರಿಗಳನ್ನು ಜಾರಿಗೆ ತರುವುದಕ್ಕೆ ಬದ್ಧರಾಗಿದ್ದೇವೆ. ಇಂಧನ ದಕ್ಷತೆ, ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಯಲ್ಲಿ ನಮ್ಮ ಉಪಕ್ರಮಗಳು ಕೇವಲ ನೀತಿಗಳಲ್ಲ, ಅವುಗಳು ನಮ್ಮ ಸಾಂಸ್ಥಿಕ ನೀತಿಯ ಅವಿಭಾಜ್ಯ ಅಂಗವಾಗಿದೆ” ಎಂದು ತಿಳಿಸಿದ್ದಾರೆ.

ಪ್ರತಿಷ್ಠಿತ ಆರ್ ವರ್ಲ್ಡ್ ಇನ್‌ಸ್ಟಿಟ್ಯೂಷನಲ್ ರ್‍ಯಾಂಕಿಂಗ್ 2025‌ನಿಂದ ನೀಡಲಾದ ಮನ್ನಣೆಯು ಸುಸ್ಥಿರ ಮತ್ತು ಪರಿಸರ ಜವಾಬ್ದಾರಿಯುತ ಕ್ಯಾಂಪಸ್ ಅನ್ನು ರಚಿಸುವ ಕಡೆಗೆ ತನ್ನ ಯಾನವನ್ನು ಮುಂದುವರಿಸಲು ಮಾಹೆಯ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿದ್ದು, ಭವಿಷ್ಯದ ಪೀಳಿಗೆಗೆ ಪರಿಸರ ಪ್ರಜ್ಞೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.

Related posts

ಋಷಿಯಾಗದವ, ಖುಷಿ ಇಲ್ಲದವ ಕವಿಯಾಗಲಾರ – ಹೆಚ್ ಡುಂಡಿರಾಜ್​

ಬೈಕ್‌ನಲ್ಲಿ ಬಂದು ಮಹಿಳೆಯ ಸರ ಎಗರಿಸಿದ ಕಳ್ಳನ ಬಂಧನ

ಮೀನು ಕದ್ದ ಆರೋಪದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ : ಪ್ರತಿಭಟನಾ ಸಭೆಯಲ್ಲಿ ಗದ್ದಲ, ರಾಜಕೀಯ ಭಾಷಣಕ್ಕೆ ವಿರೋಧ