ಮಣಿಪಾಲ : ಮಣಿಪಾಲ್ ಅಕಾಡೆಮಿ ಹೈಯರ್ ಎಜುಕೇಶನ್ [ಮಾಹೆ]ಯ ಪ್ರಕಾಶನ ಘಟಕವಾದ ಮಣಿಪಾಲ್ ಯೂನಿವರ್ಸಲ್ ಪ್ರೆಸ್ [ಎಂಯುಪಿ] ನ ಪ್ರಕಟಣೆಯಾಗಿರುವ ‘ಜೆನಿಸಿಸ್ ಆಫ್ ದಿ ಸ್ಪೀಚ್ ಆ್ಯಂಡ್ ಹಿಯರಿಂಗ್ ಪ್ರೊಫೆಶನ್ ಇನ್ ಇಂಡಿಯ ಆ್ಯಂಡ್‌ಇಟ್ಸ್ ಗ್ರೋಥ್ ‘ಇತ್ತೀಚೆಗೆ ಲೋಕಾರ್ಪಣೆಗೊಂಡಿದ್ದು, ಆರೋಗ್ಯ ವಿಜ್ಞಾನಕ್ಷೇತ್ರದಲ್ಲಿ ಇದು ಪ್ರಮುಖ ಆಕರ ಗ್ರಂಥವಾಗಲಿದೆ. ಈ ಗ್ರಂಥವನ್ನು ಡಾ. ಕಲ್ಯಾಣಿ ಮಂಡ್ಕೆ ಮತ್ತು ಡಾ. ಬಿ. ರಾಜಶೇಖರ್ ಅವರು ಸಂಪಾದಿಸಿದ್ದುಇದು ಭಾರತದಲ್ಲಿ ವಾಕ್ ಮತ್ತು ಶ್ರವಣ ಕ್ಷೇತ್ರದ ಇತಿಹಾಸ ಮತ್ತುಅಭಿವೃದ್ಧಿಯ ಹಂತಗಳ ಅಪೂರ್ವ ದಾಖಲೆಯಾಗಿದೆ.
ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್ ಅವರು ಗ್ರಂಥವನ್ನು ಲೋಕಾರ್ಪಣೆಗೊಳಿಸುತ್ತ ಮಾತನಾಡಿ, ‘ವಾಕ್ ಮತ್ತುಶ್ರವಣ ಕ್ಷೇತ್ರದ ಮೇಲೆ ತಂತ್ರಜ್ಞಾನ ಕ್ಷೇತ್ರವು ಮಹತ್ತರ ಪರಿವರ್ತನೆಯನ್ನುತರುತ್ತಿದ್ದು, ಈ ಪರಿವರ್ತನೆಯನ್ನು ಪ್ರಸ್ತುತ ಗ್ರಂಥವು ಸಮರ್ಥವಾಗಿದಾಖಲಿಸಿದೆ. ವರ್ತಮಾನದ ಮತ್ತು ಭವಿಷ್ಯದ ಸಂಶೋಧಕರಿಗೆ ಈ ಗ್ರಂಥವು ಅತ್ಯುತ್ತಮ ಸಂಪನ್ಮೂಲ ಕೃತಿಯಾಗಲಿದೆ.’ ಎಂದರು.
ಡಾ. ಕಲ್ಯಾಣಿ ಮಂಡ್ಕೆ ಅವರು ತಮ್ಮ ವೃತ್ತಿಜೀವನದ ಅನುಭವಗಳನ್ನುಹಂಚಿಕೊಂಡರು, ಭಾರತದಲ್ಲಿ ವೃತ್ತಿಯ ಮೂಲವನ್ನು ಕುರಿತು ತಮ್ಮಲೇಖನವು ಈ ಸಮಗ್ರ ಪುಸ್ತಕವಾಗಿ ಹೇಗೆ ವಿಸ್ತರಿಸಿದೆ ಎಂಬುದನ್ನುವಿವರಿಸಿದರು. ಡಾ. ಸುನೀಲ ಜಾನ್ ಮತ್ತು ಡಾ. ರಾದೀಶ್ ಕುಮಾರ್ ಅವರಕೊಡುಗೆಗಳೊಂದಿಗೆ ಅವರು ಡಾ. ರಾಜಶೇಖರ್ ಅವರೊಂದಿಗೆಪುಸ್ತಕವನ್ನು ಸಹ-ಸಂಪಾದಿಸಿದ್ದಾರೆ. ಡಾ. ಮಾಂಡ್ಕೆ ಅವರು ಭಾರತದಲ್ಲಿದಾಖಲಿತ ಶೈಕ್ಷಣಿಕ ಸಂಪನ್ಮೂಲಗಳ ಅಂತರವನ್ನು ತುಂಬುವ ಪುಸ್ತಕದಗುರಿಯನ್ನು ಒತ್ತಿ ಹೇಳಿದರು.
ಡಾ.ಬಿ.ರಾಜಶೇಖರ್ ಅವರು ಪುಸ್ತಕ ರಚನೆಗೆ ಕಾರಣವಾದ ಸಮರ್ಪಣೆಮತ್ತು ಶ್ರಮದ ಬಗ್ಗೆ ಮಾತನಾಡಿ, ಡಾ.ಮಂಡ್ಕೆ ಅವರ ಪರಿಶ್ರಮವನ್ನು ಶ್ಲಾಘಿಸಿದರು. ಡಾ. ಡಾ. ಬಿ. ರಾಜಶೇಖರ್ ಅವರು ವಾಕ್ ಮತ್ತು ಶ್ರವಣಕ್ಷೇತ್ರದ ಸಂಶೋಧನೆಯಲ್ಲಿ ಮಾರ್ಗದರ್ಶಕರಾದ ಡಾ. ಎನ್. ರತ್ನ ಮತ್ತುಪ್ರೊ. ರಮೇಶ್ ಓಝಾ ಅವರ ಪ್ರಯತ್ನಗಳನ್ನು ಸ್ಮರಿಸಿಕೊಂಡರು.
ಎಂಯುಪಿಯ ಪ್ರಧಾನ ಸಂಪಾದಕರು ಮತ್ತು ಮಾಹೆಯ ಐರೋಪ್ಯಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ. ನೀತಾ ಇನಾಂದಾರ್ ಅವರುಪ್ರಾಸ್ತಾವಿಕವಾಗಿ ಮಾತನಾಡಿ ಪ್ರಸ್ತುತ ಗ್ರಂಥವನ್ನು ಪ್ರಕಟಿಸಲು ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಅಭಿಮಾನ ಪಡುತ್ತದೆ’ ಎಂದರು. ಈ ಗ್ರಂಥವುಎಂಯುಪಿಯ 280 ನೆಯ ಪ್ರಕಟಣೆಯಾಗಿದ್ದು, ಪ್ರಸ್ತುತ ಮಾಹೆಯಪ್ರಕಾಶನ ಸಂಸ್ಥೆಯು ಜಾಗತಿಕ ಮಟ್ಟದ ವ್ಯಾಪ್ತಿಯಲ್ಲಿ ಸ್ಪ್ರಿಂಗರ್ ನೇಚರ್ ಮತ್ತು ಟೈಲರ್ & ಫ್ರಾನ್ಸಿಸ್‌ನಂಥ ಪ್ರತಿಷ್ಠಿತ ಪುಸ್ತಕ ಪ್ರಕಾಶನ ಸಂಸ್ಥೆಗಳಜೊತೆಗೆ ಸಹಭಾಗಿತ್ವವನ್ನು ಹೊಂದಿದೆ’ ಎಂದು ಡಾ. ಇನಾಂದಾರ್ ಹೇಳಿದರು.