ಲೋಕಕಲ್ಯಾಣಾರ್ಥ ಪೇಜಾವರ ಶ್ರೀ ನೇತೃತ್ವದಲ್ಲಿ ಅಯೋಧ್ಯೆ ರಾಮ‌ಜನ್ಮಭೂಮಿಯಲ್ಲಿ ಮಹಾಯಾಗ ಸಂಪನ್ನ

ಉಡುಪಿ : ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ಅಯೋಧ್ಯೆಯ ರಾಮದೇವರ ಸನ್ನಿಧಿಯಲ್ಲಿ ರಾಮ ತಾರಕ ಯಜ್ಞ ಸಪ್ತಾಹ ಸಂಪನ್ನವಾಗಿದೆ.

ಪಿತೃಪಕ್ಷದ ಸಂದರ್ಭದಲ್ಲಿ ಲೋಕಕಲ್ಯಾಣದ ಸಂಕಲ್ಪವನ್ನಿಟ್ಟುಕೊಂಡು ಅಯೋಧ್ಯೆಯ ರಾಮ‌ಜನ್ಮಭೂಮಿಯಲ್ಲಿ ಈ ಮಹಾಯಾಗ ನಡೆಸಲಾಗಿತ್ತು. ವೈದಿಕರ ಮುಖೇನ ನಡೆಸಿದ ರಾಮತಾರಕ ಯಜ್ಞ ಸಪ್ತಾಹವು ಗುರುವಾರ ನವಮೀ ತಿಥಿ ಪುನರ್ವಸು ನಕ್ಷತ್ರದ ದಿನದಂದೇ ಸಂಪನ್ನಗೊಂಡಿದೆ ಎಂದು ರಾಮಮಂದಿರ ಟ್ರಸ್ಟ್ ವಿಶ್ವಸ್ತರಾದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಗುರುವಾರ ಅಯೋಧ್ಯೆ ರಾಮಮಂದಿರದ ಯಾಗಶಾಲೆಯಲ್ಲಿ ಒಂದು ವಾರ ನಡೆದ ರಾಮತಾರಕ ಯಜ್ಞ ಪೂರ್ಣಾಹುತಿಯ ನಂತರ ಈ ಸಂದೇಶ ನೀಡಿದ್ದಾರೆ.

ಪೂರ್ಣಾಹುತಿ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ವಿಹಿಂಪ ರಾಷ್ಟ್ರೀಯ ಮುಖಂಡ ಗೋಪಾಲ್ ಜಿ‌,ಮಂದಿರದ ಅರ್ಚಕ ಪ್ರಮುಖರು, ಶ್ರೀಗಳ ಆಪ್ತ ಕೃಷ್ಣಮೂರ್ತಿ ಭಟ್, ಮೊದಲಾದವರಿದ್ದರು. ಕ್ಷೇತ್ರದಲ್ಲಿ ರಾಮ ದೇವರ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಪೇಜಾವರ ಸ್ವಾಮೀಜಿ ನೇತೃತ್ವದಲ್ಲಿ ವೈದಿಕ ಕಾರ್ಯಗಳು ನಡೆದಿದ್ದವು. ಈಗಲೂ ಕರಾವಳಿಯ ವೈದಿಕರ ಮೂಲಕ ಯಾಗ ಯಜ್ಞಗಳು ಮುಂದುವರೆದಿರುವುದು ವಿಶೇಷ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ