ಟ್ರೇಡಿಂಗ್‌‌ನಲ್ಲಿ ಲಾಭಾಂಶದ ಆಮಿಷ : 2 ಲಕ್ಷ ರೂ. ವಂಚನೆ

ಮಣಿಪಾಲ : ಇಲ್ಲಿನ ಆಫೀಸರ್ ಕಾಲನಿ ನಿವಾಸಿ ಮನೋಜ್‌ ಅವರಿಗೆ ಟ್ರೇಡಿಂಗ್‌ ಲಾಭಾಂಶದ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ ನಡೆದಿದೆ. ಅಪರಿಚಿತರು ಇವರ ಮೊಬೈಲ್‌ ಸಂಖ್ಯೆಯನ್ನು ಟ್ರೇಡಿಂಗ್‌ ವಾಟ್ಸಪ್‌ ಗ್ರೂಪ್‌ಗೆ ಸೇರಿಸಿ ಟ್ರೇಡಿಂಗ್‌ ಬಗ್ಗೆ ಹಾಗೂ ಅಧಿಕ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ನಂಬಿಸಿದ್ದಾರೆ.

ಅನಂತರ ಆರೋಪಿಗಳು ಮನೋಜ್‌ ಅವರಿಂದ ಹಂತಹಂತವಾಗಿ 2.65 ಲಕ್ಷ ರೂ.ಗಳನ್ನು ಜಮೆ ಮಾಡಿಸಿಕೊಂಡಿದ್ದಾರೆ. ಬಳಿಕ ಮನೋಜ್‌ ಹೂಡಿಕೆ ಹಣವನ್ನು ವಿತ್‌ಡ್ರಾ ಮಾಡಿದ್ದಾರೆ. ಕೆಲವು ದಿನಗಳ ಅನಂತರ ಮನೋಜ್‌ ಅವರ ಉಳಿತಾಯ ಖಾತೆಯಲ್ಲಿದ್ದ 2.20 ಲಕ್ಷ ರೂ.ಗಳನ್ನು ಮಹಾರಾಷ್ಟ್ರದ ಬಿಹಾನ್‌ ಮುಂಬಯಿ ಸಿಟಿ ಸೈಬರ್‌ ಪೊಲೀಸ್‌ ಠಾಣೆಯಿಂದ ಲೀನ್‌ ಮಾಡಿಸಲಾಗಿದೆ ಎಂದು ನಂಬಿಸಿ 2.2 ಲಕ್ಷ ರೂ. ವಂಚನೆ ಮಾಡಿದ್ದಾಗಿ ಉಡುಪಿಯ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ