ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷ – ವ್ಯಕ್ತಿಗೆ 49 ಲಕ್ಷ ರೂ ವಂಚನೆ

ಉಡುಪಿ : ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಬಗ್ಗೆ ದೂರು ದಾಖಲಾಗಿದೆ.

ಮೂಡುಬೆಳ್ಳೆಯ ಫ್ರಾನ್ಸಿಸ್‌ ಕ್ಯಾಸ್ತಲಿನೋ ಅವರ ಪುತ್ರನ ಮೊಬೈಲ್‌ ಸಂಖ್ಯೆಯನ್ನು ಯಾರೋ ಅಪರಿಚಿತ ವ್ಯಕ್ತಿಗಳು ಸ್ಟಾಕ್‌ ಮಾರ್ಕೆಟ್‌ ನೇವಿಗೇಶನ್‌ ಎಂಬ ವಾಟ್ಸಾಪ್‌ ಗ್ರೂಪ್‌‌ಗೆ ಸೇರಿಸಿದ್ದರು.

ಷೇರು ಮಾರುಕಟ್ಟೆ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಹಣ ಹೂಡಿಕೆ ಮಾಡಲು ತಿಳಿಸಿದ ಮೇರೆಗೆ ಆತ ತನ್ನ ತಂದೆಗೆ ಈ ವಿಚಾರ ತಿಳಿಸಿದ್ದ. ಅದರಂತೆ ಅವರು ಅಪರಿಚಿತರು ಸೂಚಿಸಿದ ಬ್ಯಾಂಕ್‌ ಖಾತೆಗೆ 2024 ಡಿಸೆಂಬರ್ 30ರಿಂದ ಹಂತಹಂತವಾಗಿ ಒಟ್ಟು 49 ಲ.ರೂ.ಗಳನ್ನು ಹೂಡಿಕೆ ಮಾಡಿದ್ದರು. ಬಳಿಕ ಈ ಬಗ್ಗೆ ಸಂಶಯಗೊಂಡು, ಮೋಸ ಹೋಗುವ ಸಾಧ್ಯತೆಯಿರುವ ಭೀತಿಯಿಂದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಆರೋಪಿಗಳು ಪುನಃ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಈ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ರಂಗನಪಲ್ಕೆಯ ಡಾ. ಬಿ. ಆರ್. ಅಂಬೇಡ್ಕರ್ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

1 ಕೋಟಿ ಅನುದಾನದಲ್ಲಿ ಹಿರಿಯಡಕ ಕರ್ನಾಟಕ ಪಬ್ಲಿಕ್ ಸ್ಕೂಲ್ ನೂತನ ಕಟ್ಟಡ ನಿರ್ಮಾಣ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶಿಲಾನ್ಯಾಸ

ಬಸ್ಸು ಮಾಲಕರಿಂದ ಟೋಲ್ ಲೂಟಿ ವಿರುದ್ಧ ಪ್ರತಿಭಟನೆ