ಅಧಿಕ ಲಾಭಾಂಶದ ಆಮಿಷ, 3,60,67,000 ಕೋಟಿ ರೂ. ವಂಚನೆ!

ಉಡುಪಿ : ಆಫ್ಲೈನ್‌ ಟ್ರೇಡಿಂಗ್‌ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ತಿಳಿಸಿ ದಂಪತಿಗೆ ಮಹಿಳೆಯೊಬ್ಬರು ಕೋಟ್ಯಂತರ ರೂ.ವಂಚಿಸಿದ ಬಗ್ಗೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಸ್ತುತ ವಿದೇಶದಲ್ಲಿರುವ ಶಿರ್ವ ಮೂಲದ ಲಿನೆಟ್‌ ಸೋಫಿಯಾ ಡಿ’ಮೆಲ್ಲೋ, ಅವರ ಪತಿ ಹಾಗೂ ಪತಿಯ ಸೋದರ ಸಂಬಂಧಿಗೆ ವಿದ್ಯಾ ಸೋಮೇಶ್ವರ ಎಂಬವರು ತಾನು ಕೆಲಸ ಮಾಡಿಕೊಂಡಿರುವ ಎಸ್‌ಪಿ ಕ್ಯಾಪಿಟಲ್ಸ್‌ ಟ್ರೇಡಿಂಗ್‌ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭ ಪಡೆಯಬಹುದು ಎಂದು ನಂಬಿಸಿದ್ದಾರೆ. ಬಳಿಕ 2019ರ ಸೆ.19ರಿಂದ 2024ರ ಆ.29ರ ವರೆಗೆ ಹಂತ ಹಂತವಾಗಿ 3,60,67,000 ರೂ.ಗಳನ್ನು ವಿದ್ಯಾ ಸೋಮೇಶ್ವರ ಅವರು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದು ಈ ವರೆಗೆ ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶ ನೀಡದೆ ವಂಚಿಸಿದ್ದಾರೆ ಎಂದು ಲಿನೆಟ್‌ ಸೋಫಿಯಾ ಡಿ’ಮೆಲ್ಲೋ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು