ಸಮುದ್ರ ಪಾಲಾಗುತ್ತಿದ್ದ ಯುವಕನ ರಕ್ಷಿಸಿದ ಸ್ಥಳೀಯರು

ಕಾಪು : ಕಾಪು ಕಡಲ ತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ಯುವಕನನ್ನು ಸ್ಥಳೀಯರು ರಕ್ಷಿಸಿದ ಘಟನೆ ನಡೆದಿದೆ. ಪಡುಗ್ರಾಮದ ನಿವಾಸಿ ಸಚಿನ್(31) ಎಂಬ ಯುವಕ, ಸಾಂಪ್ರದಾಯಿಕ ಮೀನುಗಾರಿಕಾ ಬಲೆ ಇಡಲು ಸಮುದ್ರದ ಕಡೆ ತೆರಳಿದ್ದನು. ನಿನ್ನೆಯ ರೆಡ್ ಅಲರ್ಟ್ ಹಿನ್ನಲೆಯಲ್ಲಿ, ಸಮುದ್ರದ ಅಬ್ಬರವು ಹೆಚ್ಚು ಇತ್ತು. ಮೀನುಗಾರನಾಗಿ ಬಲೆಯನ್ನು ಬಿತ್ತುತ್ತಿದ್ದ ಸಚಿನ್, ಆಕಸ್ಮಿಕವಾಗಿ ಅಬ್ಬರದ ಅಲೆಗಳಿಗೆ ಬಲಿಯಾಗಿ ಸಮುದ್ರದಲ್ಲಿ ಮುಳುಗಿದನು.

ಯುವಕ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಬೊಬ್ಬೆ ಹಾಕಿ ಇತರರ ಗಮನ ಸೆಳೆದರು. ಸ್ಥಳೀಯ ಮೀನುಗಾರರಾದ ಶರ್ಮ ಮತ್ತು ಹರೀಶ್ ಕರ್ಕೆರ, ತಮ್ಮ ಜೀವದ ಹಂಗು ತೊರೆದು, ದೋಣಿಯ ಮೂಲಕ ಸಮುದ್ರದಲ್ಲಿ ಮುಳುಗುತ್ತಿದ್ದ ಸಚಿನ್‌ರನ್ನು ರಕ್ಷಣೆ ಮಾಡಿದರು.

ನಿರಂತರ ಪ್ರಯತ್ನಗಳ ನಂತರ, ಲೈಫ್ ಗಾರ್ಡ್‌ಗಳು ಮತ್ತು ಸ್ಥಳೀಯರ ಸಹಕಾರದಿಂದ, ಯುವಕನನ್ನು ಸುರಕ್ಷಿತವಾಗಿ ದಡಕ್ಕೆ ತಂದು, ಅವನನ್ನು ಮರಣದ ದವಡೆಯಿಂದ ಉಳಿಸಿದರು.

ಸ್ಥಳೀಯ ಮೀನುಗಾರರಾದ ಶರ್ಮ ಮತ್ತು ಹರೀಶ್ ಕರ್ಕೆರ

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ