ಕೋಡಿಯಲ್ಲಿ ಕಳ್ಳನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು! ‘ಚಡ್ಡಿ ಬಿನಿಯನ್ ಗ್ಯಾಂಗ್’ ಸದಸ್ಯ ಎಂಬ ಗುಮಾನಿ

ಕುಂದಾಪುರ : ಕುಂದಾಪುರದ ಕೋಡಿಯಲ್ಲಿ ಕಳ್ಳನೊಬ್ಬನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕುಂದಾಪುರ ಬಳಿಯ ಕೋಡಿ ಫಿಶರೀಸ್ ಏರಿಯಾದಲ್ಲಿ ಈ ಘಟನೆ ನಡೆದಿದೆ.

ಈತ ಕೇವಲ ಚಡ್ಡಿ ಮತ್ತು ಬನಿಯನ್ ಧರಿಸಿ ಅನುಮಾನಾಸ್ಪದವಾಗಿ ತಿರುಗುತ್ತಾ, ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಸಾರ್ವಜನಿಕರು ಹಿಡಿದಿದ್ದಾರೆ. ಮೊದಲು ಈತನನ್ನು ನೋಡಿ ಜನರು ಆತಂಕಗೊಂಡಿದ್ದರು. ಕಾರಣ, ಈ ಹಿಂದೆ ಜಿಲ್ಲೆಯಲ್ಲಿ ‘ಚಡ್ಡಿ ಬನಿಯನ್ ಗ್ಯಾಂಗ್’ ಎಂಬ ಖತರ್ನಾಕ್ ಕಳ್ಳರ ತಂಡ ಸಕ್ರಿಯವಾಗಿತ್ತು. ಹೀಗಾಗಿ, ಈತ ಚಡ್ಡಿ ಬನಿಯನ್ ಗ್ಯಾಂಗ್‌ನ ಸದಸ್ಯನೇ ಇರಬಹುದು ಎಂದು ಜನರು ಸಂಶಯ ವ್ಯಕ್ತಡಿಸಿದ್ದಾರೆ.

ಕಳ್ಳನನ್ನು ಹಿಡಿದು ಎರಡೇಟು ನೀಡಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕರೆದೊಯ್ದರು. ಸದ್ಯ ಪೊಲೀಸರು ಈ ಕಳ್ಳನ ಪೂರ್ವಾಪರದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ