ಜಾನುವಾರುಗಳ ಶುಷ್ರೂಷಕಿ ಸುಶೀಲ ಶೆಟ್ಟಿ ನಿಧನ

ಮಣಿಪಾಲ : ಹಾವಂಜೆ ಗ್ರಾಮದ ಕೀಳಂಜೆಯ ನಿವಾಸಿ ದಿವಂಗತ ಕಂಪು ಶೆಟ್ಟಿ ಅವರ ಧರ್ಮಪತ್ನಿ ಶ್ರೀಮತಿ ಸುಶೀಲಾ ಶೆಟ್ಟಿ 74 ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

ಮೃತರು ಕೃಷಿಕರಾಗಿದ್ದು, ಹಾವಂಜೆ ಗ್ರಾಮದ ಸುತ್ತಮುತ್ತ ಜಾನುವಾರುಗಳು ಕರು ಹಾಕಿದಾಗ ಅದರ ಶುಶ್ರೂಷೆ, ಆರೈಕೆ ಮತ್ತು ಅಗತ್ಯ ಮಾಹಿತಿ ನೀಡುತ್ತಿದ್ದರು.

ಈ ಕಾರ್ಯಕ್ಕೆ ಯಾವುದೇ ಪ್ರತಿಫಲಾಪೇಕ್ಷ ಇಲ್ಲದೆ ಉಚಿತವಾಗಿ ಆರೈಕೆ ಮಾಡುತ್ತಿದ್ದು ಸ್ಥಳೀಯವಾಗಿ ಜನ ಮನ್ನಣೆ ಗಳಿಸಿದ್ದರು.
ಮೃತರು ಮೂರು ಹೆಣ್ಣು ಮಕ್ಕಳು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

Related posts

ಅನೂಪ್ ಮತ್ತು ಮಂಜುಶ್ರೀ ಇತ್ತೀಚೆಗೆ ಹಾಡಿದ್ದ ಹಾಡಿನ ವೀಡಿಯೋ ಇದೀಗ ವೈರಲ್

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ

ಆಕಸ್ಮಿಕವಾಗಿ ಬಾವಿಗೆ ಬಿದ್ದು ಯುವತಿ ಸಾವು