ಟ್ರಾನ್ಸ್‌ಫಾರ್ಮ‌ರ್ ದುರಸ್ತಿ ವೇಳೆ ವಿದ್ಯುತ್ ಶಾಕ್‌ಗೆ ಬಲಿಯಾದ ಲೈನ್‌ಮ್ಯಾನ್

ಬೈಂದೂರು : ವಿದ್ಯುತ್ ಟ್ರಾನ್ಸ್‌ಫಾರ್ಮ‌ರ್ ದುರಸ್ತಿ ವೇಳೆ ವಿದ್ಯುತ್ ಶಾಕ್ ತಗುಲಿ ಲೈನ್‌ಮ್ಯಾನ್ ಮೃತಪಟ್ಟ ಘಟನೆ ಇಂದು ಬೈಂದೂರಿನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಮೂಲತಃ ಉತ್ತರ ಕರ್ನಾಟಕದ ಮುಂಡಗೋಡು ನಿವಾಸಿಯಾಗಿರುವ, ಬೈಂದೂರು ಮೆಸ್ಕಾಂನಲ್ಲಿ ಕಳೆದ ಎಂಟು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಸಲೀಂ(38) ಎಂದು ಗುರುತಿಸಲಾಗಿದೆ.

ವಿವಾಹಿತರಾಗಿರುವ ಇವರು ಎರಡು ತಿಂಗಳ ಮಗು ಹೊಂದಿದ್ದಾರೆ. ಬೈಂದೂರು ಪರಿಸರದ ಜನಸ್ನೇಹಿ ಲೈನ್‌ಮ್ಯಾನ್ ಆಗಿರುವ ಇವರು ಅಕಾಲಿಕ ನಿಧನ ಎಲ್ಲರಿಗೂ ಬೇಸರ ತಂದಿದೆ.

ವಿದ್ಯುತ್ ಶಾಕ್ ತಗುಲಿ ಕಳೆದ ವರ್ಷ ಶಿರೂರಿನ ಉದ್ಯಮಿಯೊಬ್ಬರು ಮೃತಪಟ್ಟರೆ, ಮೇ ತಿಂಗಳಲ್ಲಿ ಶಿರೂರಿನ ಮೀನುಗಾರ ವ್ಯಕ್ತಿ ವಿದ್ಯುತ್‌ ತಂತಿ ತುಳಿದು ಸಾವನ್ನಪ್ಪಿದ್ದರು. ಇಂದು ಮದ್ಯಾಹ್ನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಟ್ರಾನ್ಸ್‌ಫಾರ್ಮ‌ರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !