ದೇಶದೆಲ್ಲಡೆ ಗ್ರಂಥಾಲಯ ಆಂದೋಲನವಾಗಲಿ : ಡಾ. ಮಹಾಬಲೇಶ್ವರ ರಾವ್

ಉಡುಪಿ : ಜನರಲ್ಲಿ ಓದುವ ಹವ್ಯಾಸ ವೃದ್ಧಿ, ಜ್ಞಾನ ಗಳಿಕೆ, ವಿದ್ಯಾವಂತರಾಗಲು ಪೂರಕವಾಗಿ ಗ್ರಂಥಾಲಯ ಆಂದೋಲನ ನಡೆದಿಲ್ಲ ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಹೇಳಿದ್ದಾರೆ.

ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಮನೆಯೇ ಗ್ರಂಥಾಲಯ ಯೋಜನೆಯಡಿ 130ನೇ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ಬಸ್, ರೈಲು, ವಿಮಾನ ನಿಲ್ದಾಣ, ಆಸ್ಪತ್ರೆ ಸಹಿತ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ವಿರಾಮ ಸಿಕ್ಕಾಗ ಓದಲು ಪುಸ್ತಕ ಭಂಡಾರ/ಗ್ರಂಥಾಲಯ ನಿರ್ಮಾಣವನ್ನು ಅಗತ್ಯ ಸೇವೆಯಾಗಿ ಪರಿಗಣಿಸಬೇಕು. ಆಧುನಿಕ ಡಿಜಿಟಲ್ ಮಾಧ್ಯಮ ಬಂದ ಮೇಲೆ ಪುಸ್ತಕ ಓದು ಕಡಿಮೆಯಾಗಿದೆ ಎಂದು ಹೇಳಿದರು. ಜಪಾನಿನ ಮಿಯಾಜಾಕಿ ವಿವಿಯ ಪ್ರೊಫೆಸರ್ ಡಾ. ಹರೀಶ್ ಕುಮಾರ್ ಮಧ್ಯಸ್ಥ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಹಫೀಝ್ ರೆಹಮಾನ್, ಕಸಾಪ ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್ ಹಂದಾಡಿ ಮತ್ತಿತರರು ಉಪಸ್ಥಿತರಿದ್ದರು.

Related posts

ರಂಗನಪಲ್ಕೆಯ ಡಾ. ಬಿ. ಆರ್. ಅಂಬೇಡ್ಕರ್ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

1 ಕೋಟಿ ಅನುದಾನದಲ್ಲಿ ಹಿರಿಯಡಕ ಕರ್ನಾಟಕ ಪಬ್ಲಿಕ್ ಸ್ಕೂಲ್ ನೂತನ ಕಟ್ಟಡ ನಿರ್ಮಾಣ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶಿಲಾನ್ಯಾಸ

ಬಸ್ಸು ಮಾಲಕರಿಂದ ಟೋಲ್ ಲೂಟಿ ವಿರುದ್ಧ ಪ್ರತಿಭಟನೆ