ವೀಣಾ ಸಂಧ್ಯಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ : ಕಲಾಸ್ಪಂದನ ಕಲಾ ಶಾಲೆಯು ಮೂವತ್ತನೆಯ ವರ್ಷಕ್ಕೆ ಕಾಲಿಡುವ ಪ್ರಯುಕ್ತ ಡಾ. ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ) ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ ವೀಣಾ ಸಂಧ್ಯಾ ಎನ್ನುವ ಪಂಚ ವೀಣಾ ಕಾರ್ಯಕ್ರಮವನ್ನು ಜೂ.20 ರಂದು ಸಂಜೆ ಗ್ರೀನ್ ವ್ಯಾಲಿ ಪ್ಯಾರಿಡೈಸ್ ರಿಟೈರ್ಮೆಂಟ್ ಹೋಂ ಮಂಚಿ ಮಣಿಪಾಲ ಇಲ್ಲಿ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಎಸ್ ಎನ್ ಕಮಲಾ‌ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಡಾ ಇಂದಿರಾ ಶಾನುಭೋಗ‌ರವರು ಉಪಸ್ಥಿತರಿದ್ದರು.

ಕಲಾ ಸ್ಪಂದನ, ಮಣಿಪಾಲದ ನಿರ್ದೇಶಕಿ ವಿದುಷಿ ಪವನ ಬಿ ಆಚಾರ್ ರವರ ಬಳಗದಿಂದ ರಿಟೈರ್ಮೆಂಟ್ ಹೋಂ ನಲ್ಲಿರುವವರಿಗೆ ಆಕ್ಟಿವಿಟಿ ನಡೆಸಲಾಯಿತು. ನಂತರ ವಿಪಂಚಿ ತಂಡ ವೀಣಾ ವಾದನವನ್ನು ನಡೆಸಿದರು.

ಕಾರ್ಯಕ್ರಮ ರಿಟೈರ್ಮೆಂಟ್ ಹೊಂ ನ ನಿವಾಸಿಗಳಿಂದ ಮೆಚ್ಚುಗೆಗಳಿಸಿತು. ಡಾ.ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್‌ನ ಸದಸ್ಯರಾದ ಡಾ. ಬಾಲಚಂದ್ರ ಆಚಾರ್ ಹಾಗೂ ಗ್ರೀನ್ ವ್ಯಾಲಿ ಪ್ಯಾರಿಡೈಸ್ ರಿಟೈರ್ಮೆಂಟ್ ಹೋಂ ನ ಟ್ರಸ್ಟಿ‌ಗಳಾದ ಡಾ. ತಾರಾ ಶಾನುಭೋಗ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ