ತಡರಾತ್ರಿಯಲ್ಲಿ ಟಯರ್ ಪಂಕ್ಚರ್ ಆಗಿ ಒದ್ದಾಡುತ್ತಿದ್ದ ಪ್ರಯಾಣಿಕರು; ಟಯರ್ ಬದಲಾಯಿಸಿ ಕೊಟ್ಟು ಮಾನವೀಯತೆ ಮೆರೆದ ಉಪ್ಪಿನಂಗಡಿ ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಉಪ್ಪಿನಂಗಡಿ : ಉಪ್ಪಿನಂಗಡಿ ಸಮೀಪದ ರಾಮನಗದಲ್ಲಿ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಬರುತ್ತಿದ್ದ ‘ಯಕ್ಷ ತೆಲಿಕೆ’ ಕಲಾವಿದರ ತಂಡ ನೆಕ್ಕಿಲಾಡಿ ತಲುಪುತ್ತಿದ್ದಂತೆ ಟಯರ್ ಪಂಕ್ಚರ್ ಆಗಿದೆ. ಟಯರ್ ಬದಲಾಯಿಸಲು ಕಾರಿನಲ್ಲಿದ್ದವರು ಒದ್ದಾಡುತ್ತಿದ್ದರು.

ಅದೇ ರಸ್ತೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ಠಾಣೆಯ ಸಿಬ್ಬಂದಿಗಳಾದ ಮೋಹನ್ ಮತ್ತು ಗಜೇಂದ್ರ ಅವರು ತಮ್ಮ ವಾಹನದಲ್ಲಿ ಬಂದು ವಿಚಾರಿಸಿದ್ದಾರೆ.

ಕಾರಿನ ಪ್ರಯಾಣಿಕರು ಟಯರ್ ಬದಲಾಯಿಸಲು ಕಷ್ಟಪಡುವುದನ್ನು ಗಮನಿಸಿದ ಸಮವಸ್ತ್ರಧಾರಿ ಸಿಬ್ಬಂದಿಗಳು ತಾವೇ ಮುಂದೆ ಬಂದು ಜಾಕ್ ಮೂಲಕ ಟಯರ್ ಬದಲಾಯಿಸಿಕೊಟ್ಟು ಹೃದಯವಂತಿಕೆ ಮೆರೆದಿದ್ದಾರೆ.

ತಮ್ಮ ಕರ್ತವ್ಯದ ನಡುವೆಯೂ ರಸ್ತೆಯಲ್ಲಿ ಪಂಕ್ಚರಾಗಿ ಬಾಕಿಯಾಗಿದ್ದ ವಾಹನದ ಚಕ್ರವನ್ನು ಬದಲಾಯಿಸಿ ಕೊಟ್ಟು ಮಾನವಿಯತೆ ಮೆರೆದ ಸಿಬ್ಬಂದಿಗಳ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ – ಕರ್ನಾಟಕ ಯುವರಕ್ಷಣಾ ವೇದಿಕೆ