ಕಾರಿನ ಗಾಜು ಒಡೆದು ಲ್ಯಾಪ್‌ಟಾ‌ಪ್ ಕಳವು

ಉಚ್ಚಿಲ : ದಸರಾ ಗೌಜಿನ ನಡುವೆ ಕಾರಿನ ಗಾಜು ಒಡೆದು ಲ್ಯಾಪ್‌ಟಾ‌ಪ್ ಕಳವು ಮಾಡಲಾಗಿದೆ. ಉಡುಪಿಯ ಉಚ್ಚಿಲ ದೇವಸ್ಥಾನದ ಹೊರಬಾಗದಲ್ಲಿ ನಿಲ್ಲಿಸಿದ್ದ ಕಾರಿನ ಎಡಬದಿಯ ಗಾಜು ಒಡೆದು ಲ್ಯಾಪ್‌ಟಾ‌ಪ್ ಅನ್ನು ಕಳವು ಮಾಡಲಾಗಿದೆ.

ಉಡುಪಿ ನಿವಾಸಿ ವಸಂತ್ ಅವರು ಕುಟುಂಬ ಸಮೇತ ನವರಾತ್ರಿಯ ಪ್ರಯುಕ್ತ ಉಚ್ಚಿಲ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಾಸು ಕಾರಿನ ಬಳಿ ಬಂದಾಗ ವಿಷಯ ಬೆಳಕಿಗೆ ಬಂದಿದೆ. ದೇವಸ್ಥಾನದ ಬಳಿ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಗಾಜನ್ನು ಒಡೆದು ಖದೀಮರು ಸುಮಾರು 45,000 ಬೆಲೆಬಾಳುವ ಲ್ಯಾಪ್‌ಟಾ‌ಪ್ ಅನ್ನು ಕದ್ದಿದ್ದಾರೆ. ಪೊಲೀಸರಿಗೆ ವಿಷಯ ತಿಳಿಸಿದಾಗ ಲ್ಯಾಪ್‌ಟಾ‌ಪ್‌ನ ಸೀರಿಯಲ್ ನಂಬರ್ ಇದ್ದರೆ ಮಾತ್ರ ಕೇಸ್ ಮಾಡಲು ಸಾಧ್ಯ ಎಂದು ತಿಳಿಸಿದ್ದಾರೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ