ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಮರುಭೂಕುಸಿತ : ರೈಲು ಸಂಚಾರ ಮತ್ತೆ ಸ್ಥಗಿತ

ಮಂಗಳೂರು : ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮೈಸೂರು ವಿಭಾಗದ ಬಾಳುಪೇಟೆ ಮತ್ತು ಸಕಲೇಶಪುರ ನಡುವಿನ ರೈಲು ಮಾರ್ಗದಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸಿದ್ದು, ಬೆಂಗಳೂರು ಮಂಗಳೂರು ರೈಲು ಸಂಚಾರದಲ್ಲಿ ಮತ್ತೆ ವ್ಯತ್ಯಯ ಉಂಟಾಗಿದೆ.

ಈ ಮಾರ್ಗದಲ್ಲಿ ಕಳೆದ ಕೆಲವು ವಾರಗಳಲ್ಲಿ ಇದು ಮೂರನೇ ಬಾರಿಗೆ ಭೂಕುಸಿತ ಉಂಟಾಗಿದ್ದು, ಈ ಹಿಂದೆ ದುರಸ್ತಿ ಕಾರ್ಯಗಳು ನಡೆದಿದ್ದರೂ ಪುನಃ ಭೂಕುಸಿತ ಸಂಭವಿಸಿದೆ. ಈ ಘಟನೆಯು ದಕ್ಷಿಣ ವಾಯುವ್ಯ ರೈಲ್ವೆಯ ಸಮಸ್ಯೆಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಘಟನೆಯ ಪರಿಣಾಮವಾಗಿ ಹಲವಾರು ರೈಲುಗಳು ರದ್ದಾಗಿದ್ದು, ಕೆಲವು ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ.

ರದ್ದು ಮಾಡಲಾದ ರೈಲುಗಳು:

  • 16585 ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ
  • 16586 ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು
  • 16516 ಕಾರವಾರ-ಯಶವಂತಪುರ

ಭಾಗಶಃ ರದ್ದಾದ ರೈಲುಗಳು:

  • 16515 ಯಶವಂತಪುರ-ಕಾರವಾರ (ಹಾಸನ-ಕಾರವಾರ ನಡುವೆ)
  • 16576 ಮಂಗಳೂರು ಜಂಕ್ಷನ್-ಯಶವಂತಪುರ (ಸಕಲೇಶಪುರ-ಯಶವಂತಪುರ ನಡುವೆ)

ಮಾರ್ಗ ಬದಲಾದ ರೈಲುಗಳು:

  • 07378 ಮಂಗಳೂರು ಸೆಂಟ್ರಲ್-ವಿಜಯಪುರ (ಮಂಗಳೂರು ಜಂಕ್ಷನ್, ಕಾರವಾರ, ಮಾದಗಾಂವ್, ಲೋಂಡಾ, ಹುಬ್ಬಳ್ಳಿ ಮಾರ್ಗವಾಗಿ)
  • 16595 ಕೆಎಸ್‌ಆರ್ ಬೆಂಗಳೂರು-ಕಾರವಾರ (ಅರಸೀಕೆರೆ, ಹುಬ್ಬಳ್ಳಿ, ಲೋಂಡಾ, ಮಾದಗಾಂವ್ ಮಾರ್ಗವಾಗಿ)
  • 16596 ಕಾರವಾರ-ಕೆಎಸ್‌ಆರ್ ಬೆಂಗಳೂರು (ಮಾದಗಾಂವ್, ಲೋಂಡಾ, ಹುಬ್ಬಳ್ಳಿ, ಅರಸೀಕೆರೆ ಮಾರ್ಗವಾಗಿ)
  • 16511 ಕೆಎಸ್‌ಆರ್ ಬೆಂಗಳೂರು-ಕಣ್ಣೂರು (ಜೋಲರ್ಪೇಟೆ ಎ, ಸೇಲಂ, ಶೋರನೂರು ಮಾರ್ಗವಾಗಿ)
  • 16512 ಕಣ್ಣೂರು-ಕೆಎಸ್‌ಆರ್ ಬೆಂಗಳೂರು (ಶೋರನೂರು, ಸೇಲಂ, ಜೋಲರ್ಪೇಟೆ ಎ ಮಾರ್ಗವಾಗಿ)

ರೈಲು ಮಾರ್ಗವನ್ನು ಸ್ವಚ್ಛಗೊಳಿಸಲು ಮತ್ತು ದುರಸ್ತಿ ಮಾಡಲು ಅಧಿಕಾರಿಗಳ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಪರಿಸ್ಥಿತಿಯನ್ನು ನಿಗಾದಿಂದ ಗಮನಿಸುತ್ತಿದ್ದಾರೆ. ಸೂಕ್ತ ದುರಸ್ತಿ ಕಾರ್ಯಗಳ ನಂತರ, ರೈಲು ಸಂಚಾರ ಪುನಃ ಆರಂಭಿಸುವ ಬಗ್ಗೆ ದಕ್ಷಿಣ ವಾಯುವ್ಯ ರೈಲ್ವೆಯ ಮುಖ್ಯ ಪಿಆರ್‌ಒ ಡಾ. ಮಂಜುನಾಥ್ ಕನಮಡಿ ಮಾಹಿತಿ ನೀಡಿದ್ದಾರೆ.

Related posts

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ – ಕರ್ನಾಟಕ ಯುವರಕ್ಷಣಾ ವೇದಿಕೆ

ಸಚಿವ ಜಾರಕಿಹೊಳಿ ಅವರಿಂದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ