ಇಮೇಲ್‌ಗೆ ಬಂದ ಲಿಂಕ್ ಕ್ಲಿಕ್ಕಿಸಿದಾಗ ಲಕ್ಷಾಂತರ ರೂ. ಮಂಗಮಾಯ!

ಉಡುಪಿ : ಇ-ಮೇಲ್‌ಗೆ ಬಂದಿದ್ದ ಲಿಂಕ್ ಕ್ಲಿಕ್ಕಿಸಿದ ವ್ಯಕ್ತಿ ಲಕ್ಷಾಂತರ ರೂ.ಕಳೆದುಕೊಂಡಿರುವ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ನೆಟ್‌ಫ್ಲಿ‌ಕ್ಸ್‌ನ ಚಂದಾ ಮುಗಿದುಹೋಗಿರುವ ಬಗ್ಗೆ ಉಡುಪಿಯ ದಿಲೀಪ್ ಅವರ ಇ-ಮೇಲ್‌‌ಗೆ ಸಂದೇಶ ಬಂದಿತ್ತು. ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಚಂದಾ ಪಡೆಯಲು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯಲು ಇನ್ನೊಂದು ಟ್ಯಾಬ್ ತೆರೆದಿದೆ. ಈ ವೇಳೆ ಅವರು ಐಸಿಐಸಿಐ ಕ್ರೆಡಿಟ್ ಕಾರ್ಡ್ ಸಂಖ್ಯೆ ನೀಡಿದಾಗ ಅವರ ಮೊಬೈಲ್‌ಗೆ ಒಟಿಪಿ ಬಂದಿದ್ದು, ಅದನ್ನು ನಮೂದಿಸಿದಾಗ ‘ಸಮ್ಥಿಂಗ್ ವೆಂಟ್ ರಾಂಗ್’ ಎಂಬ ಸಂದೇಶ ಬಂದಿದೆ. ಪುನಃ ಮೊಬೈಲ್‌ಗೆ ಮತ್ತೊಂದು ಒಟಿಪಿ ಬಂದಿತ್ತು. ಈ ವೇಳೆ ದಿಲೀಪ್‌‌ಗೆ ಸಂದೇಹ ಬಂದಿದ್ದು ಐಸಿಐಸಿಐ ಬ್ಯಾಂಕ್‌ನ ಹೆಲ್ಪಲೈನ್‌ಗೆ ಕರೆ ಮಾಡಿದಾಗ ಅವರ ಖಾತೆಯಿಂದ 1,29,944 ರೂ. ಅನಾಮಧೇಯ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿರುವುದು ತಿಳಿಯಿತು. ಬಳಿಕ ಅವರು ದೂರು ದಾಖಲಿಸಿದ್ದಾರೆ.

Related posts

ಗ್ರಾಮೀಣ ಬಂಟರ ಸಂಘದ ಸ್ಕಿಲ್ ಡೆವೆಲಪ್ಮೆಂಟ್ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ

ಉಗ್ರರನ್ನು ಸದೆಬಡಿಯಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪತ್ರಕರ್ತ ಸಂದೀಪ್ ಪೂಜಾರಿಗೆ ಶ್ರದ್ಧಾಂಜಲಿ ಸಭೆ