ಆನ್‌ಲೈನ್ ಗೇಮ್‌ಗಾಗಿ ಲಕ್ಷಾಂತರ ಸಾಲ : ಹಣ ತರುವಂತೆ ಪತ್ನಿಯ ಮೇಲೆ ಹಲ್ಲೆ, ಜೀವ ಬೆದರಿಕೆ : ಪತಿ, ಆತನ ಮನೆಯವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ…!

ಉಡುಪಿ : ಪತಿ ಹಾಗೂ ಆತನ ಮನೆಯವರು ಹಣ ನೀಡುವಂತೆ ಪೀಡಿಸಿ, ಜೀವ ಬೆದರಿಕೆ ಒಡ್ಡಿದ ಬಗ್ಗೆ ತೆಂಕನಿಡಿಯೂರು ಗ್ರಾಮದ ಸ್ವಾತಿ ನೀಡಿದ ದೂರಿನಂತೆ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೀತಿಸಿ ಮದುವೆಯಾಗಿದ್ದ ಯೋಗೀಶ್‌ ಆನ್‌ಲೈನ್‌ ಗೇಮಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದು, ವಿಪರೀತ ಸಾಲ ಮಾಡಿಕೊಂಡಿದ್ದ. ತಾಯಿ ಮನೆಯಿಂದ ಹಣ ತರುವಂತೆ ಪತ್ನಿಗೆ ಪೀಡಿಸುತ್ತಿದ್ದ. ಪತ್ನಿಯ ಒಡವೆಗಳನ್ನು ಅಡವಿಟ್ಟಿದ್ದಲ್ಲದೆ, ಆಕೆಗೆ ದೈಹಿಕ ಹಿಂಸೆ ಮಾಡುತ್ತಿದ್ದ. ಯೋಗೀಶ್‌ನ ಸಾಲವನ್ನು ಮರುಪಾವತಿಸಬೇಕು, ಇಲ್ಲವಾದಲ್ಲಿ ಮನೆಯಿಂದ ಹೊರ ಹಾಕುವುದಾಗಿ ಆತನ ತಾಯಿ, ತಮ್ಮ, ಅಕ್ಕ ಎಲ್ಲರೂ ಸೇರಿ ಸ್ವಾತಿ ಮೇಲೆ ಒತ್ತಡ ಹಾಕುತ್ತಿದ್ದರು. ಇದುವರೆಗೆ ಸಾಲ ಮಾಡಿಸಿ ಹಾಗೂ ಬಲವಂತವಾಗಿ 46 ಲಕ್ಷ ರೂ.ಯನ್ನು ಪತ್ನಿಯಿಂದ ಯೋಗೀಶ್‌ ಪಡೆದುಕೊಂಡಿದ್ದ.

ಸ್ವಾತಿ ಬೆಂಗಳೂರಿನಿಂದ ಪೆರ್ಡೂರಿನಲ್ಲಿರುವ ಗಂಡನ ಮನೆಗೆ ಬಂದಿದ್ದಾಗ, ಪತಿಯ ಮನೆಯವರೆಲ್ಲರೂ ಸೇರಿ ಹಣ ಕೊಡದಿದ್ದಲ್ಲಿ ಮನೆಗೆ ಬರುವುದು ಬೇಡ ಎಂದು ಹೊರ ಹಾಕಿದ್ದಾರೆ. ಅಲ್ಲದೆ ಯೋಗೀಶ್‌ ಕರೆ ಮಾಡಿ ಪತ್ನಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಪ್ರಕರಣ ದಾಖಲಾಗಿದೆ.

Related posts

ಕೃಷ್ಣಮಠದಲ್ಲಿ ಗೀತಾ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಸಾಧು ಶ್ರೀ ಭದ್ರೇಶ ದಾಸ್

ಜುಬಿಲಿ 2025 ವಿಶೇಷ ಯೋಜನೆ : ತೊಟ್ಟಂ ಚರ್ಚಿನಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಚಾಲನೆ

ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಗತ್ಯ ಸಿದ್ಧತೆ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ