ಕುರಿಯ ಗೋಪಾಲಕೃಷ್ಣ ಭಟ್ ನಿಧನ

ಕುರಿಯ ವಿಠಲ ಶಾಸ್ತ್ರಿಗಳ ಸಹೋದರನ ಮಗ, ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳ ಕಿರಿಯ ಸಹೋದರ ಕುರಿಯ ಗೋಪಾಲಕೃಷ್ಣ ಭಟ್ ಇಂದು(21.8.24) ನಿಧನ ಹೊಂದಿದರು.

ಕುರಿಯ ಮೂಲ ಮನೆಯ ಸಮೀಪಲ್ಲಿದ್ದು ಮನೆಯ ವ್ಯವಹಾರ ನೋಡಿಕೊಳ್ಳುತ್ತಿದ್ದ ಇವರು ಅಣ್ಣ ಗಣಪತಿ ಶಾಸ್ತ್ರಿಗಳ ಕಲಾಬದುಕಿಗೆ ಯಾವುದೇ ತೊಡಕಾಗದಂತೆ ಅವರನ್ನು ಚೆನ್ನಾಗಿ ನೋಡಿಕೊಂಡು ಬಂದಿದ್ದರು. ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲೆಯಲ್ಲಿ ಕಛೇರಿ ಅಧೀಕ್ಷಕರಾಗಿದ್ದ ಇವರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ದೊಡ್ಡ ಕಲಾಮನೆತನದಲ್ಲಿ ಜನಿಸಿದ, ಸಹೃದಯಿ ಕಲಾಪೋಷಕರಾಗಿದ್ದ ಇವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ